ಮಂಗಳೂರು : ‘ಕೇಂದ್ರ ಸರಕಾರವು ಐದು ರಾಜ್ಯಗಳ ಚುನಾವಣೆಯ ಸಂದರ್ಭ ಈ ವಿಶೇಷ ಅಧಿವೇಶನ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಈಗಾಗಲೇ ತೀರ್ಮಾನ ಆಗಿರುವ ಶೇ.33 ಮಹಿಳಾ ಮೀಸಲಾತಿ ಜಾರಿ ಸ್ವಾಗತಾರ್ಹ. 2010ರಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಆಗಿದ್ದಾಗಲೇ ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿಯನ್ನು ಪ್ರಸ್ತಾವಿಸಿದಾಗ ಇದೇ ಬಿಜೆಪಿಯವರು ವಿರೋಧಿಸಿದ್ದರು.
ಈಗ ಅದನ್ನು ಜಾರಿಗೆ ತರುವುದು ಸ್ವಾಗತಾರ್ಹ. ಆದರೆ ಸದ್ಯ ಜನಗಣತಿ ನಡೆಯುತ್ತಿರುವ ಸಂದರ್ಭ ಕ್ಷೇತ್ರ ವಿಂಗಡನೆ ಆಧಾರದಲ್ಲಿ ಮೀಸಲಾತಿ ಮಾತ್ರ ಸಂವಿಧಾನ ವಿರೋಧವಾಗಿದೆ. ಇದರಿಂದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮೊದಲಾದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ’ ಎಂದು ಐವನ್ ಡಿಸೋಜ ಹೇಳಿದರು.

