ಉಡುಪಿ: ಜಿಲ್ಲೆಯ ವಿವಿಧಡೆ ಶನಿವಾರ ರಾತ್ರಿ ಏಕಾಏಕಿ ಮಳೆ ಸುರಿದಿದೆ. ಈ ಅನಿರೀಕ್ಷಿತ ಮಳೆಯಿಂದ ಜನ ಕಂಗಲಾಗಿದ್ದಾರೆ. ಸುರಿಯುವ ಮಳೆಯಲ್ಲೇ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ರಥೋತ್ಸವ ನಡೆದಿದೆ.
ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಉತ್ಸವ ನೇಮೋತ್ಸವಗಳು ಏರ್ಪಾಟ್ ಆಗಿತ್ತು. ಮಳೆಯಿಂದಾಗಿ ಈ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಿತ್ತು. ಪ್ರತಿದಿನ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಉತ್ಸವ ನಡೆಯುವುದು ಸಂಪ್ರದಾಯ.
ಮಳೆಯನ್ನೂ ಲೆಕ್ಕಿಸದೆ ಚಿನ್ನದ ರಥೋತ್ಸವ ನಡೆಸಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಭಕ್ತರು ಸುರಿಯುವ ಮಳೆಯಲ್ಲೇ ರಥವನ್ನು ಎಳೆದಿದ್ದಾರೆ . ಪರ್ಯಾಯ ಶ್ರೀಗಳು ಕೂಡ ಉತ್ಸವದಲ್ಲಿ ಭಾಗಿಯಾಗಿದ್ದಾರೆ .ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆ ನಂತರ ಬಿಡುವು ನೀಡಿದೆ.

