ತುಮಕೂರು: ನಗರ ಹೊರವಲಯದ ಸತ್ಯಮಂಗಲ ಬಳಿಯ ಹಳೆಯ ಟೈರ್‌ಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ಪ್ರಮಾಣದ ನಷ್ಟವಾಗಿದೆ.

ಬಾಲಾಜಿ ಟ್ರಾನ್ಸ್‌ಪೋರ್ಟ್‌ ಗೋದಾಮಿನಲ್ಲಿದ್ದ ಟೈರ್‌ಗಳು ಬೆಂಕಿಗೆ ಆಹುತಿಯಾಗಿವೆ. ಇಲ್ಲಿ ಕೆಲಸ ಮಾಡುವವರು ಯಾರೂ ಇರಲಿಲ್ಲ. ಗೋದಾಮಿನ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅವಘಡದ ನಂತರ ಹೆಚ್ಚಿನ ಸಂಖ್ಯೆಯ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ಪ್ರಕರಣ ದಾಖಲಾಗಿದೆ.