Bengaluru 27°C
Ad

“MURDER OF RENUKASWAMY” ಹೆಸರಿನಲ್ಲಿ ವಿಕಿಪಿಡಿಯಾ ಪೇಜ್ ಓಪನ್

Renuka

ಬೆಂಗಳೂರು: ಇಡೀ ರಾಜ್ಯದ ಜೊತೆಗೆ ದೇಶದಲ್ಲೇ ಸದ್ದು, ಸುದ್ದಿ ಮಾಡಿರೋ ರೇಣುಕಾಸ್ವಾಮಿ ಕೊಲೆ ಕೇಸ್ ಕೂಡ ವಿಕಿಪೀಡಿಯಾದಲ್ಲಿ ಲಭ್ಯವಾಗ್ತಾ ಇದೆ. ಹೌದು. . ಇಡೀ ದೇಶದಲ್ಲೇ ಸೆನ್ಷೇಷನ್​​ ಅನಿಸಿಕೊಂಡ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಒಂದು ವಿಕಿಪೀಡಿಯ ಪೇಜ್​ ಕ್ರಿಯೇಟ್ ಮಾಡಲಾಗಿದೆ.

ಯಾವಾಗ ಈ ಸುದ್ದಿ ಕಾಡ್ಗಿಚ್ಚಿನ ರೀತಿಯಲ್ಲಿ ಹಬ್ಬಿತೋ ಜೊತೆಗೆ ನಟ ದರ್ಶನ್ ಮಾಡಿದ್ದ ಕೊಲೆ ಎನ್ನಲಾದ ಕೇಸ್​ ಹಿನ್ನಲೆ ಈ ಸುದ್ದಿ ಸಾಕಷ್ಟು ಸೌಂಡ್ ಮಾಡಿತ್ತು. ಹಾಗೂ ಇದನ್ನು ಯಾರೋ ಇಂಟರ್​ನೆಟ್​ ಬಳಕೆದಾರರು ಸೃಷ್ಟಿ ಮಾಡಿರೋದಲ್ಲ. ಬದಲಾಗಿ ರೇಣುಕಾಸ್ವಾಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಇದನ್ನು ಸ್ವತಃ ವಿಕಿಪೀಡಿಯಾನೇ ಕ್ರಿಯೇಟ್ ಮಾಡಿದ್ದಾಗಿದೆ. “MURDER OF RENUKASWAMY” ಹೆಸರಿನಲ್ಲಿ ವಿಕಿಪಿಡಿಯಾ ಪೇಜ್ ಓಪನ್ ಮಾಡಲಾಗಿದೆ.

ಈ ಪೇಜ್‌ ನಲ್ಲಿ ರೇಣುಕಾಸ್ವಾಮಿ ದರ್ಶನ್ Darshan’s long time partner ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ.ಹಾಗಾಗಿ ಈತನನ್ನು ದರ್ಶನ್​ ಜೊತೆ ಕೆಲಸ ಮಾಡುವ ಹುಡುಗರು ಕೊಲೆ ಮಾಡಿದ್ದಾರೆ ಅಂತ ಉಲ್ಲೇಖ ಮಾಡಲಾಗಿದೆ. ಹಾಗೂ ಈತನ ಸಾವಿನ ಕಾರಣ ಎಂದರೆ ಶಾಕ್ ಹಾಗೂ ಮಾರಣಾಂತಿಕ ಹಲ್ಲೆ ಅಂತ ಹೇಳಲಾಗಿದೆ.

ನೀವೂ ಗಮನಿಸಿರಬಹುದು. . ಇದುವರೆಗೆ ಜಗತ್ತಿನಲ್ಲಿ ನಡೆದಿರೋ ಪ್ರಮುಖ ನಾಯಕರ ಹತ್ಯೆ, ಅತೀ ಹೈಪ್ರೊಫೈಲ್​ ಕೊಲೆಗಳು ಅಥವಾ ಅಪರಾಧಗಳು ಜೊತೆಗೆ ಇತಿಹಾಸದಲ್ಲಿ ನಡೆದ ಸೆನ್ಷೇಷನಲ್​ ಕ್ರೈಂಗಳ ಬಗ್ಗೆ ಮಾತ್ರ ಉಲ್ಲೇಖ ಮಾಡ್ತಾ ಇದ್ದ ವಿಕಿಪೀಡಿಯ, ಇದೀಗ ರೇಣುಕಸ್ವಾಮಿ ಕೊಲೆಯನ್ನು ಅದರಲ್ಲಿ ಪಟ್ಟಿ ಮಾಡಿ, ಅಪ್ಲೋಡ್​ ಮಾಡಿರೋದು ಆಶ್ಚರ್ಯಕರವಾಗಿದೆ.

Ad
Ad
Nk Channel Final 21 09 2023
Ad