Bengaluru 23°C
Ad

ಧೂಮಪಾನದ ಎಫೆಕ್ಟ್; ವ್ಯಕ್ತಿಯ ಗಂಟಲಿನ ಒಳಗೆ ಬೆಳೆಯಿತು ಕೂದಲು

Hair

ಆಸ್ಟ್ರಿಯಾದಲ್ಲಿ ಧೂಮಪಾನಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಬೆಳಕಿಗೆ ಬಂದಿದೆ. ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ವೈದ್ಯರ ಬಳಿಗೆ ಹೋದಾಗ ಶಾಕಿಂಗ್‌ ವಿಚಾರವೊಂದು ಬೆಳಕಿಗೆ ಬಂದಿದೆ.

ಹೌದು. . . 20 ನೇ ವಯಸ್ಸಿನಲ್ಲಿ ಧೂಮಪಾನ ಮಾಡಲು ಪ್ರಾರಂಭಿಸಿದ್ದ ಈ 52 ವರ್ಷದ ವ್ಯಕ್ತಿಯ ಗಂಟಲಿನಲ್ಲಿ ಅಸಹಜ ಕೂದಲು ಬೆಳವಣೆಯಾಗುತ್ತಿರುವುದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ ವಿಶ್ವದಲ್ಲೇ ಇದು ಮೊದಲ ಪ್ರಕರಣವಾಗಿದೆ.

ಅಮೇರಿಕನ್ ಜರ್ನಲ್ ವರದಿಯ ಪ್ರಕಾರ, ರೋಗಿಯು 1990 ರಿಂದ ಸಿಗರೇಟ್ ಸೇದುವ ಅಭ್ಯಾಸ ಹೊಂದಿದ್ದ. 2007 ರಲ್ಲಿ ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದಾಗಿ ವೈದ್ಯರ ಬಳಿಗೆ ಹೋದಾಗ ಗಂಟಲಿನ ಒಳಭಾಗದಲ್ಲಿ ಅನೇಕ ಸಣ್ಣ ಕಪ್ಪು ಕೂದಲುಗಳು ಬೆಳೆದಿರುವುದು ಪರೀಕ್ಷೆಯ ವೇಳೆ ಕಂಡು ಬಂದಿದೆ. ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ.

ಇದಾದ ಬಳಿಕ ವೈದ್ಯರು ರೋಗಿಗೆ ಔಷಧಿ ನೀಡಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ವರದಿಯ ಪ್ರಕಾರ, ವೈದ್ಯರು ಗಂಟಲಿನಿಂದ ಕೂದಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದ್ದಾರೆ. ಆದರೆ ಇದರ ನಂತರವೂ ರೋಗಿಯ ಕುತ್ತಿಗೆಯಲ್ಲಿ ಮುಂದಿನ 14 ವರ್ಷಗಳವರೆಗೆ ಕೂದಲು ಬೆಳೆಯುತ್ತಲೇ ಇತ್ತು. ನಿಯಮಿತ ಧೂಮಪಾನದಿಂದ ವ್ಯಕ್ತಿಯು ಈ ಸಮಸ್ಯೆಗೆ ಒಳಗಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ಧೂಮಪಾನವು ಗಂಟಲಿನಲ್ಲಿ ಊತವನ್ನು ಉಂಟುಮಾಡುತ್ತದೆ, ಇದರಿಂದಾಗಿ ಜೀವಕೋಶಗಳು ಸಣ್ಣ ಕೂದಲುಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಕೂದಲುಗಳು 6-9 ಇಂಚುಗಳವರೆಗೆ ಬೆಳೆಯುತ್ತವೆ ಮತ್ತು ಕೆಲವೊಮ್ಮೆ ಬಾಯಿಯನ್ನು ಕೂಡ ತಲುಪಬಹುದು. ವರದಿಯ ಪ್ರಕಾರ, ವ್ಯಕ್ತಿ 2020 ರಲ್ಲಿ ಧೂಮಪಾನವನ್ನು ತೊರೆದಿದ್ದು, ಆತನಿಗೆ ಎಂಡೋಸ್ಕೋಪಿಕ್ ಆರ್ಗನ್ ಪ್ಲಾಸ್ಮಾ ಎಂಬ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ, ಕೂದಲು ಬೆಳೆಯುವ ಮಾರ್ಗವನ್ನು ಮುಚ್ಚಲಾಗುತ್ತದೆ. ಸುಮಾರು 2 ವರ್ಷಗಳ ಚಿಕಿತ್ಸೆಯ ನಂತರ, ವ್ಯಕ್ತಿಯು ಈ ಸಮಸ್ಯೆಯಿಂದ ಹೊರಬಂದಿರುವುದಾಗಿ ತಿಳಿಸಿದೆ.

Ad
Ad
Nk Channel Final 21 09 2023
Ad