Bengaluru 21°C
Ad

ಚಿಕನ್ ಪೀಸ್ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ದಾರುಣ ಮೃತ್ಯು

ಗಂಟಲಲ್ಲಿ ಚಿಕನ್ ಪೀಸ್ ಸಿಕ್ಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣ ರಾಜಧಾನಿಯ ಹೈದರಾಬಾದ್ ಸಿಟಿಯಲ್ಲಿನ ಷಾದ್ ನಗರದಲ್ಲಿ ನಡೆದಿದೆ.

ಹೈದರಾಬಾದ್: ಗಂಟಲಲ್ಲಿ ಚಿಕನ್ ಪೀಸ್ ಸಿಕ್ಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣ ರಾಜಧಾನಿಯ ಹೈದರಾಬಾದ್ ಸಿಟಿಯಲ್ಲಿನ ಷಾದ್ ನಗರದಲ್ಲಿ ನಡೆದಿದೆ.

ಹೈದರಾಬಾದ್​ನ ಅನ್ನಾರಂ ಗ್ರಾಮದ ನಿವಾಸಿ ಶ್ರೀಕಾಂತ್ (39) ಸಾವನ್ನಪ್ಪಿದ ದುರ್ದೈವಿ. ಇವರು ತನ್ನ ಸಹೋದರಿಯ ಮನೆಗೆ ಬಂದಿದ್ದನು. ಈ ವೇಳೆ ಕೋಟಿ ಎನ್ನುವ ನಗರದಲ್ಲಿನ ವೈನ್​ಶಾಪ್​ಗೆ ಹೋಗಿ ಚೆನ್ನಾಗಿ ಮದ್ಯಪಾನ ಮಾಡಿದ್ದಾರೆ.

ಬಳಿಕ ನಶೆಯಲ್ಲಿಯೇ ಬಿರಿಯಾನಿ ಹೋಟೆಲ್​ಗೆ ಹೋಗಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿ ತಿಂದಿದ್ದಾರೆ. ಹೋಟೆಲ್​ನಿಂದ ಹೊರಗಡೆ ಬರುವವರೆಗೂ ಚೆನ್ನಾಗಿಯೇ ಇದ್ದರು ಎಂದು ಹೇಳಲಾಗಿದೆ.

ಆದರೆ ಹೋಟೆಲ್​​ನಿಂದ ಸ್ವಲ್ಪ ದೂರ ಬಂದ ಮೇಲೆ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಚಿಕನ್​ ಪೀಸ್ ನೋವು ಕೊಡಲು ಪ್ರಾರಂಭಿಸಿದೆ. ಇದರಿಂದ ಶ್ವಾಸಕೋಶದಲ್ಲಿ ಗಾಳಿಯಾಡದೇ ನರಳಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಬಿದ್ದು ಒದ್ದಾಡಿ, ಒದ್ದಾಡಿ ವ್ಯಕ್ತಿ ಕಣ್ಣು ಮುಚ್ಚಿದ್ದಾರೆ.

ಕುಡಿದ ಮತ್ತಿನಲ್ಲಿ ಬಿರಿಯಾನಿ ಹೇಗೆಂದರೆ ಹಾಗೇ ತಿಂದಿರುವುದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

https://x.com/TeluguScribe/status/1804739323872547038?

Ad
Ad
Nk Channel Final 21 09 2023
Ad