News Karnataka Kannada
Friday, May 03 2024
ತಂತ್ರಜ್ಞಾನ

ವಾಟ್ಸಾಪ್‌ ನಲ್ಲಿ ಈ ಮೆಸೇಜ್‌ ಲಿಂಕ್‌ಗಳನ್ನೂ ಎಂದಿಗೂ ಓಪನ್​ ಮಾಡ್ಬೇಡಿ!

Whstup
Photo Credit : News Kannada

ವಾಟ್ಸಪ್ ಎನ್ನುವುದು ಇಂದು ಜನಪ್ರಿಯ ಮಾಧ್ಯಮವಾಗಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಬಹುತೇಕ ಎಲ್ಲರೂ ವಾಟ್ಸಪ್ ಅನ್ನು ತಪ್ಪದೆ ಬಳಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗೋ ಅಜ್ಜ ,ಅಜ್ಜಿಯರೂ ವಾಟ್ಸಪ್ ಬಿಟ್ಟು ಬಳಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಬಳಕೆ ಹೆಚ್ಚಿದಂತೆ ಇದರ ಮೂಲಕ ಹಣ ಎಗರಿಸುವ ಕೆಲಸವೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳದ ಮೂಲಕ ಇತ್ತೀಚೆಗೆ ಅನೇಕ ಕಂಪೆನಿಗಳು ಮಾರಾಟಗಾರರು ಜಾಹೀರಾತುಗಳನ್ನು ನೀಡುತ್ತಾರೆ. ಇದರ ಮೂಲಕ ಹಣ ಎಗರಿಸುವ ಕೆಲಸ ನಡೆಯುತ್ತಿರುತ್ತದೆ. ಹೀಗಾಗಿ ವಾಟ್ಸಪ್ ನಲ್ಲಿ ಬರುವ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಮೆಸೇಜ್‌ ಗಳು ಯಾವುದು ಎಂಬುದರ ಕುರಿತು ಕಂಪ್ಲೀಟ್‌ ಮಾಹಿತಿ ಇಲ್ಲಿವೆ.

 

ಬ್ಯಾಂಕ್ ಅಲರ್ಟ್ URL(ಗಳು): ಸಂದೇಶದಲ್ಲಿನ ಯುಎಲ್‌ಆರ್ / ಲಿಂಕ್ ಮೂಲಕ ಕೆವೈಸಿಯನ್ನು ಪೂರ್ಣಗೊಳಿಸುವಂತೆ ಬಳಕೆದಾರರಿಗೆ SMS ಅಥವಾ ವಾಟ್ಸಾಪ್ನಲ್ಲಿ ಸ್ವೀಕರಿಸಿದ ಬ್ಯಾಂಕ್ ಎಚ್ಚರಿಕೆ ಸಂದೇಶವು ಬರುತ್ತವೆ. ಇದು ನಕಲಿಯಾಗಿದೆ. ನಿಮ್ಮ ಹಣವನ್ನು ಎಗರಿಸುವ ಉದ್ದೇಶವಾಗಿರುತ್ತದೆ.

ಉದ್ಯೋಗಾವಕಾಶ: ಉದ್ಯೋಗ ಆಫರ್ ನ ಸಂದೇಶವು ವಾಟ್ಸಪ್ ಗಳಲ್ಲಿ ಹೆಚ್ಚಾಗಿ ಬರುತ್ತವೆ. ಆದರೆ ಇದು ಶುದ್ಧ ಸುಳ್ಳು. ಯಾಕೆಂದರೆ ಯಾವುದೇ ಉದ್ಯೋಗದ ಅವಕಾಶಗಳು ವಾಟ್ಸಪ್ ಹಾಗೂ SMS ಮೂಲಕ ಬರುವುದಿಲ್ಲ.

OTT ಚಂದಾದಾರಿಕೆ ಮೆಸೇಜ್ ಗಳು: ಒಟಿಟಿಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ, ಸ್ಕ್ಯಾಮರ್ಗಳು ನೆಟ್ಫ್ಲಿಕ್ಸ್ ಅಥವಾ ಇತರ ಒಟಿಟಿ ಚಂದಾದಾರಿಕೆಗಳ ಸುತ್ತ ಸಂದೇಶ ಕಳುಹಿಸುವ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಈ ಉಚಿತ ಕೊಡುಗೆಗಳು ವಂಚನೆಯಿಂದ ಕೂಡಿರುತ್ತವೆ.

• ಅಮೆಜಾನ್ ಫೇಕ್ ಮಿಸ್ಡ್ ಡೆಲಿವರಿ: ಆನ್ಲೈನ್ ಶಾಪಿಂಗ್ ಬಗ್ಗೆ ನಿಮ್ಮ ಡೆಲಿವರಿ ರದ್ದುಗೊಂಡಿದೆ ಅಥವಾ ತಪ್ಪಿಹೋಗಿದೆ ಎಂದು ಎಸ್‌ಎಂಎಸ್ ಅಥವಾ ವಾಟ್ಸಾಪ್ನಲ್ಲಿ ಸಂದೇಶ ಬಂದರೆ, ಈ ರೀತಿಯ ಸಂದೇಶವು ವಂಚನೆಯಾಗಬಹುದು.

•  ಶಾಪಿಂಗ್ ಎಚ್ಚರಿಕೆ: ನೀವು ಮಾಡದ ಖರೀದಿಯ ಬಗ್ಗೆ ಯಾವುದೇ ನವೀಕರಣವು ಹಗರಣವಾಗಿದೆ. ಬಳಕೆದಾರರು ತಮ್ಮ ಫೋನ್ಗಳನ್ನು ಕ್ಲಿಕ್ ಮಾಡಲು ಮತ್ತು ಹ್ಯಾಕ್ ಮಾಡಲು ಉತ್ತೇಜನಕಾರಿಯಾದ ಸಂದೇಶಗಳನ್ನು ಬರೆದು ನಿಮ್ಮನ್ನು ಯಾಮಾರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆ್ಯಪ್​ ನಲ್ಲಿ ಇಂತಹ ಕೆಲಸ ನಡೆಯುತ್ತಿದೆ. ಹಣ ಕದಿಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಇದರ ಬಗ್ಗೆ ವಾಟ್ಸಪ್ ಬಳಕೆ ಮಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು