News Karnataka Kannada
Monday, April 29 2024
ತಂತ್ರಜ್ಞಾನ

ಕೇವಲ 6,999 ರೂ. ಗೆ ಭಾರತದ ಸ್ಮಾರ್ಟ್​ಫೋನ್ ಬಿಡುಗಡೆ

Lava Mobiles introduced
Photo Credit : Twitter

ಭಾರತದ ಪ್ರಸಿದ್ಧ ಸ್ಮಾರ್ಟ್​ಫೋನ್ ಕಂಪನಿ ‘ಲಾವಾ’ ದೇಶದಲ್ಲಿ ಆಗಾಗ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುತ್ತದೆ. ಹೆಚ್ಚಾಗಿ ಬಜೆಟ್ ಬೆಲೆಯ ಮೊಬೈಲ್ ಅನ್ನು ಅನಾವರಣ ಮಾಡುವ ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ದೇಶದಲ್ಲಿ ತನ್ನ ಹೊಸ ಲಾವಾ ಯುವ 2 ಸ್ಮಾರ್ಟ್​ಫೋನನ್ನು ರಿಲೀಸ್ ಮಾಡಿದೆ.

ಭಾರತದಲ್ಲಿ ‘ಲಾವಾ ಯುವ 2’ ಸ್ಮಾರ್ಟ್​ಫೋನ್ ಸದ್ಯಕ್ಕೆ ಬಿಡುಗಡೆ ಆಗಿದೆ. ಇದರ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ನಿಗದಿ ಮಾಡಲಾಗಿದೆ. ಇದನ್ನು ಗ್ಲಾಸ್ ಬ್ಲೂ, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಪ್ರಸ್ತುತ ಭಾರತದಲ್ಲಿ ಲಾವಾ ಇ-ಸ್ಟೋರ್ ಮೂಲಕ ಮಾರಾಟ ಕಾಣುತ್ತಿದೆ.

ಡ್ಯುಯಲ್-ಸಿಮ್ (ನ್ಯಾನೋ) ಹೊಂದಿರುವ ಲಾವಾ ಯುವ 2 ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರ ಮತ್ತು 269ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.51-ಇಂಚಿನ HD+ (720×1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. 3GB RAM, 13-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ,ಹಿಂಬದಿಯ ಕ್ಯಾಮೆರಾ HDR, ಪೋರ್ಟ್ರೇಟ್, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ, 64GB ಯ ಆಂತರಿಕ ಸಂಗ್ರಹಣೆ, ಮೈಕ್ರೋ SD ಕಾರ್ಡ್ ಮೂಲಕ 512GB, 4G, ಬ್ಲೂಟೂತ್ 5 ಬೆಂಬಲಿಸುತ್ತದೆ.10W ಚಾರ್ಜಿಂಗ್‌, 5,000mAh ಬ್ಯಾಟರಿ ಹೊಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು