ದೆಹಲಿ: ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5ಜಿಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5ಉ ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5ಜಿ ನೆಟ್ವರ್ಕ್ ಹೊಂದಿದ ಪ್ರದೇಶವಾಗಿದೆ.
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”5 ತಿಂಗಳಲ್ಲಿ 1 ಲಕ್ಷ 5 ಜಿ ನೆಟ್ವರ್ಕ್ ಅನ್ನು ರಚಿಸಲಾಗಿದೆ, 8 ತಿಂಗಳಲ್ಲಿ 2 ಲಕ್ಷ ನೆಟ್ವರ್ಕ್ ಮತ್ತು 10 ತಿಂಗಳಲ್ಲಿ 3 ಲಕ್ಷ ನೆಟ್ವರ್ಕ್ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5ಉ ಸೈಟ್ಗಳನ್ನು ಸ್ಥಾಪಿಸಲಾಗಿದೆ,” ಎಂದು ಅಶ್ವಿನಿ ವೈಷ್ಣವ್ ಉಲ್ಲೇಖಿಸಿದ್ದಾರೆ.
“5ಜಿ ಸೈಟ್ಗಳನ್ನು ನಿರ್ಮಿಸಲು ಕೇಂದ್ರವು ಅನೇಕ ಯೋಜನೆಗಳನ್ನು ರೂಪಿಸಿದೆ. ಭಾರತವು 5ಉ ನೆಟ್ವರ್ಕ್ಗೆ ವೇಗವಾಗಿ ಸಂಪರ್ಕ ಹೊಂದುತ್ತಿದೆ” ಎಂದು ಕೇಂದ್ರ ರಾಜ್ಯ ಸಚಿವ ದೇವ್ಸಿನ್ಹ್ ಚೌಹಾಣ್ ಹೇಳಿದ್ದಾರೆ.
ಕಳೆದು ತಿಂಗಳು, ಸಂವಹನ ಖಾತೆಯ ರಾಜ್ಯ ಸಚಿವ ದೇವ್ಸಿನ್ಹ್ ಚೌಹಾಣ್, ”ಭಾರತವು 5G ಗೆ ಯುಗದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದರು. 9 ತಿಂಗಳಲ್ಲಿ 2.70 ಲಕ್ಷ 5ಜಿ ಸೈಟ್ಗಳನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಶೀಘ್ರದಲ್ಲೇ 6 ಜಿ ತಂತ್ರಜ್ಞಾನವನ್ನು ಕೂಡ ಆದಷ್ಟು ಬೇಗ ಪರಿಚಯಿಸುತ್ತೇವೆ,” ಎಂದು ಹೇಳಿದ್ದರು.