News Karnataka Kannada
Monday, May 06 2024
ತಂತ್ರಜ್ಞಾನ

ʼಗೂಗಲ್ ಪಿಕ್ಸೆಲ್ 8, ಪ್ರೊ’ ಸ್ಮಾರ್ಟ್ ಫೋನ್ ರಿಲೀಸ್‌: ಏನಿದರ ವೈಶಿಷ್ಟ್ಯ

Google Pixel 8, Pro launched in India: Here's what you need to know
Photo Credit : Twitter

ನವದೆಹಲಿ: ಮೇಡ್ ಬೈ ಗೂಗಲ್ ಇವೆಂಟ್‌ನಲ್ಲಿ ಲಾಂಚ್ ಆಗಿರುವ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಸಾಕಷ್ಟು ಗಮನ ಸೆಳೆಯುತ್ತದೆ. ಗೂಗಲ್ ಟೆನ್ಸರ್ ಜಿ3 ಆಧರಿತವಾಗಿರುವ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೋ ಸ್ಮಾರ್ಟ್‌ಫೋನ್‌ಗಳು ಕಾರ್ ಕ್ರ್ಯಾಶ್ ಪತ್ತೆ ಮತ್ತು ಫೋಟೋ ಅನ್‌ಬ್ಲರ್ ಫೀಚರ್‌ಗಳನ್ನು ಒಳಗೊಂಡಿವೆ. ಎಐ ಸಾಮರ್ಥ್ಯಗಳು ಮತ್ತು ಅತ್ಯುತ್ತಮ ಕ್ಯಾಮೆರಾಗಳನ್ನು ಈ ಫೋನ್‍‌ಗಳು ಹೊಂದಿವೆ.

ಕಂಪನಿಯು ಗೂಗಲ್ ಪಿಕ್ಸೆಲ್ 8 ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಬೇಸ್ ವೇರಿಯಂಟ್ 8 ಜಿಬಿ + 128 ಜಿಬಿ ಸ್ಟೋರೇಜ್ ನೊಂದಿಗೆ ಬರುತ್ತದೆ ಮತ್ತು ಮೇಲಿನ ರೂಪಾಂತರವು 8 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್ ನೊಂದಿಗೆ ಬರುತ್ತದೆ. ಪಿಕ್ಸೆಲ್ 8 ಪ್ರೊ 12 ಜಿಬಿ ರ್ಯಾಮ್ನೊಂದಿಗೆ 25 ಜಿಬಿ ಮತ್ತು 512 ಜಿಬಿ ಸ್ಟೋರೇಜ್ ಆಯ್ಕೆಗಳನ್ನು ಪಡೆಯುಬಹುದು. ಪಿಕ್ಸೆಲ್ 8 ನಲ್ಲಿ, ಗ್ರಾಹಕರು 6.2-ಇಂಚಿನ ಆಕ್ಚುವಾ ಡಿಸ್ಪ್ಲೇಯನ್ನು 120 ಹೆರ್ಟ್ಜ್ ರಿಫ್ರೆಶ್ ರೇಟ್ ನೊಂದಿಗೆ ಪಡೆಯಬಹುದು. ಗೂಗಲ್ ಪಿಕ್ಸೆಲ್ 8 ಪ್ರೊನಲ್ಲಿ 6.7 ಇಂಚಿನ ಡಿಸ್ಪ್ಲೇ ನೀಡಿದೆ. ಇದರಲ್ಲಿ, ಬಳಕೆದಾರರು 120 ಹೆರ್ಟ್ಜ್ ರಿಫ್ರೆಶ್ ರೇಟ್ ಪಡೆಯುತ್ತಾರೆ.

ಪಿಕ್ಸೆಲ್ 8 ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.ಇದರಲ್ಲಿ ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮತ್ತು ಸೆಕೆಂಡರಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಆಗಿದೆ. ಪಿಕ್ಸೆಲ್ 8 ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 10.5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಪಿಕ್ಸೆಲ್ 8 ಪ್ರೊನಲ್ಲಿ, ಕಂಪನಿಯು 48 ಎಂಪಿ, 50 ಎಂಪಿ ಮತ್ತು 48 ಎಂಪಿ ಲೆನ್ಸ್ಗಳೊಂದಿಗೆ ಟ್ರಿಪಲ್ ಕ್ಯಾಮೆರಾವನ್ನು ನೀಡಿದೆ. ಪಿಕ್ಸೆಲ್ 8 ಪ್ರೊನಲ್ಲಿ, ಕಂಪನಿಯು 10.5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಿದೆ.

ಗೂಗಲ್‌ನ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಬೆಲೆ 75,999 ರೂ. ಹಾಗೆಯೇ ಗೂಗಲ್ ಪಿಕ್ಸೆಲ್ 8 ಪ್ರೋ ಸ್ಮಾರ್ಟ್‌ಫೋನ್ ಬೆಲೆ 1,06,999 ಇದೆ. ಆ್ಯಪಲ್‌ ಫೋನ್, ಐಫೋನ್ 15 ಲಾಂಚ್ ಮಾಡಿದ ಬೆನ್ನಲ್ಲೇ ಗೂಗಲ್ ತನ್ನ ಪಿಕ್ಸೆಲ್ 8 ಸರಣಿ ಫೋನುಗಳನ್ನು ಲಾಂಚ್ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು