ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡದ ಅಬ್ಬರ ಮುಂದುವರಿದಿದೆ. ದಕ್ಷಿಣ ಕೊರಿಯಾ ವಿರುದ್ಧದ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ 5-3 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.
ಈ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿತ್ತು. ಹಾರ್ದಿಕ್ ಮೊದಲ ಗೋಲು ಸಿಡಿಸುವ ಮೂಲಕ ಆರಂಭಿಕ ಮುನ್ನಡೆಯನ್ನು ಒದಗಿಸಿದರೆ ನಂತರ ಮಂದೀಪ್ ಸಿಂಗ್ ಎರಡನೇ ಗೋಲು ಸಿಡಿಸಿ ಮೇಲುಗೈ ನೀಡಿದರು. ನಂತರ ಲಲಿತ್ ಉಪದ್ಯಾಯ್ ಮೂರನೇ ಗೋಲು ಸಿಡಿಸುವ ಮೂಲಕ ಮೊದಲ ಕ್ವಾರ್ಟರ್ನಲ್ಲಿಯೇ ಭಾರತ ತಂಡದ ಹಿಡಿತ ಸಾಧಿಸಲು ಕಾರಣವಾದರು.
ಪಂದ್ಯ ಮುಕ್ತಾಯಕ್ಕೆ ಇನ್ನು 6 ನಿಮಿಷಗಳ ಬಾಕಿ ಇದ್ದಾಗ ಭಾರತದ ಅಭಿಷೇಕ್ 5ನೇ ಗೋಲ್ ಗಳಿಸಿ ಅಂಕದ ಅಂತರವನ್ನು ಹೆಚ್ಚಿನಿ ಟೈ ಆಗದಂತೆ ನೋಡಿಕೊಂಡರು. ಸಮಯದ ಮುಕ್ತಾಯಕ್ಕೆ ಭಾರತ 5-3ರಿಂದ ಮುನ್ನಡೆ ಸಾಧಿಸಿ ಸೋಲಿಲ್ಲದ ಸರದಾರನಾಗಿ ಫೈನಲ್ ಗೆ ಲಗ್ಗೆಯಿಟ್ಟಿತ್ತು