News Karnataka Kannada
Saturday, May 18 2024
ಕ್ರೀಡೆ

ಜೊಕೊವಿಚ್​ಗೆ ಸೋಲುಣಿಸಿ ವಿಂಬಲ್ಡನ್ ​ಕಿರೀಟ ಗೆದ್ದ ಅಲ್ಕರಾಝ್

carlos alcaraz
Photo Credit : Twitter

ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ 20ರ ಹರೆಯದ ಸ್ಪೇನ್​ನ ಕಾರ್ಲೊಸ್ ಅಲ್ಕರಾಝ್ ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಂಡನ್​ ಸೆಂಟರ್ ಕೋರ್ಟ್​ನಲ್ಲಿ ನಡೆದ ಅಂತಿಮ ಹಣಾಹಣಿಯು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಆರಂಭದಲ್ಲೇ ಸರ್ವ್​ಗಳ ಮೂಲಕ ತಮ್ಮ ಅನುಭವವನ್ನು ಧಾರೆಯೆರೆದ ನೊವಾಕ್ ಜೊಕೊವಿಚ್, ಯುವ ಆಟಗಾರ ಕಾರ್ಲೊಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.

ಜೊಕೊವಿಚ್ ಅವರ ಕ್ರಾಸ್ ಕೋರ್ಟ್ ರಿಟರ್ನ್ ಹೊಡೆತಗಳಿಗೆ ಮರುತ್ತರ ನೀಡುವಲ್ಲಿ ವಿಫಲರಾದ ಕಾರ್ಲೊಸ್ ಆರಂಭದಲ್ಲೇ ಪಾಯಿಂಟ್ ಕಲೆಹಾಕುವಲ್ಲಿ ಹಿಂದೆ ಉಳಿದರು. ಆದರೆ ದ್ವಿತೀಯ ಸೆಟ್​ನ ಆರಂಭದಲ್ಲೇ ಪ್ರಬಲ ಸರ್ವ್​ಗಳ ಮೂಲಕ ಕಾರ್ಲೊಸ್ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದರು. ಇತ್ತ ಬ್ಯಾಕ್‌ಹ್ಯಾಂಡ್ ರಿಟರ್ನ್ ಹೊಡೆತಗಳ ಮೂಲಕ ನೊವಾಕ್ ತಂತ್ರಕ್ಕೆ ಕಾರ್ಲೊಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಪರಿಣಾಮ ಜೊಕೊವಿಚ್ ಪಾಯಿಂಟ್ ಖಾತೆ ತೆರೆಯುವ ಮುನ್ನವೇ ಕಾರ್ಲೊಸ್ ಅಲ್ಕರಾಝ್ 0-2 ಮುನ್ನಡೆ ಪಡೆದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ 2 ಪಾಯಿಂಟ್ಸ್​ಗಳಿಸುವ ಮೂಲಕ ಐದನೇ ಸುತ್ತನ್ನು 6-4 ಅಂತರದಿಂದ ಗೆದ್ದುಕೊಂಡರು. ಈ ಮೂಲಕ 20ನೇ ವಯಸ್ಸಿನಲ್ಲೇ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಕಾರ್ಲೊಸ್ ಅಲ್ಕರಾಝ್ ತಮ್ಮದಾಗಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು