ಮುಂಬೈ: ಮಾಡ್ರನ್ ಕ್ರಿಕೆಟ್ ದೊರೆ ವಿರಾಟ್ ಕೊಹ್ಲಿ ಹಾಗೂ ಡಬಲ್ ಸೆಂಚುರಿ ಸಾಮ್ರಾಟ ರೋಹಿತ್ ಶರ್ಮಾ ಇದೇ ವರ್ಷ ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳೋಕೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರು ನಿವೃತ್ತಿಯಾಗ್ತಾರೆ ಅಂದರೆ ಅನೇಕರಿಗೆ ಅಚ್ಚರಿ ಆಗಬಹುದು. ಆದರೂ ನೀವು ನಂಬಲೇಬೇಕು. ಯಾಕಂದ್ರೆ ಈ ವರ್ಷ ಭಾರತ ತಂಡ ಕೇವಲ 3 ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅದನ್ನ ಬಿಟ್ರೆ ಬ್ಯಾಕ್ ಟು ಬ್ಯಾಕ್ ಟಿ20 ಪಂದ್ಯಗಳನ್ನ ಆಡಲಿದೆ. ಜೂನ್ನಲ್ಲಿ ಟಿ20 ವಿಶ್ವಕಪ್ ಬೇರೆ ನಡೆಯಲಿದೆ. ಇದರ ಕಡೆ ಹೆಚ್ಚು ಗಮನ ಹರಿಸಲು ಫಿಫ್ಟಿ ಓವರ್ ಕ್ರಿಕೆಟ್ನಿಂದ ದೂರ ಸರಿಯಲು ಕೊಹ್ಲಿ ಹಾಗೂ ರೋಹಿತ್ ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.
ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಸಾಲಿಡ್ ಟಚ್ನಲ್ಲಿದ್ದಾರೆ. ಕಳೆದ ಒನ್ಡೆ ವಿಶ್ವಕಪ್ನಲ್ಲೇ ಅದು ಪ್ರೂವ್ ಆಗಿತ್ತು. 11 ಪಂದ್ಯಗಳಲ್ಲಿ ಅತ್ಯಧಿಕ 765 ರನ್ ಸಿಡಿಸಿ ತ್ರಿವಿಕ್ರಮನಾಗಿ ಮೆರೆದರು . 35 ವರ್ಷದ ವಿರಾಟ್ ಈಗಲೂ ಫುಲ್ ಫಿಟ್ & ಫೈನ್ ಆಗಿದ್ದಾರೆ. ಇಂತಹ ಕೊಹ್ಲಿಗೆ ಒನ್ಡೆ ನಿವೃತ್ತಿ ಕಷ್ಟ ಅನ್ನಿಸಬಹುದು. ಆದರೆ ಧೋನಿಯಂತೆ ಅಚ್ಚರಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.
ಇನ್ನು ರೋಹಿತ್ ಶರ್ಮಾ ಈ ವರ್ಷ ಒನ್ಡೆ ಕ್ರಿಕೆಟ್ಗೆ ವಿದಾಯ ಘೋಷಿಸುವ ಸಾಧ್ಯತೆ ಹೆಚ್ಚಿದೆ. ರೋಹಿತ್ಗೆ ಈಗಾಗಲೇ 36 ವರ್ಷ ಆಗಿದ್ದು ಎಪ್ರಿಲ್ಗೆ 37 ವರ್ಷ ತುಂಬಲಿದೆ. ವರ್ಷ ಕಳೆದಂತೆ ಹಿಟ್ಮ್ಯಾನ್ ಆರ್ಭಟ ಮರೆಯಾಗ್ತಿದೆ. ಯಂಗ್ ಸ್ಟರ್ಸ್ ಅಬ್ಬರ ಬೇರೆ ಜೋರಾಗಿದೆ. ಹೀಗಾಗಿ 2024 ರಲ್ಲೇ ರೋಹಿತ್ ಏಕದಿನ ಕರಿಯರ್ ಮುಕ್ತಾವಾಘುವ ಸಾಧ್ಯತೆ ಕೂಡಾ ದಟ್ಟವಾಗಬಹುದು.