News Karnataka Kannada
Thursday, May 02 2024
ಕ್ರೀಡೆ

ಮತ್ತೆ ಮೈದಾನಕ್ಕೆ ಎಂಟ್ರಿಕೊಟ್ಟ ಜಾರ್ವೋ 69

Jarvo
Photo Credit : Twitter

ಚೆನ್ನೈ: ಭಾರತ ತಂಡ ಕಳೆದ ವರ್ಷ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ ಹಲುವು ಬಾರಿ ಟೀಮ್ ಇಂಡಿಯಾ ಸಮವಸ್ತ್ರ ತೊಟ್ಟು ಅಂಗಣ ಪ್ರವೇಶ ಮಾಡಿದ್ದ ಜಾರ್ವೊ, ಇದೀಗ ತಮ್ಮ ಕಿತಾಪತಿಯನ್ನು ಭಾರತದಲ್ಲೂ ಮುಂದುವರಿಸಿದ್ದಾರೆ.  ಐಸಿಸಿ ಒಡಿಐ ವಿಶ್ವಕಪ್‌ 2023 ಟೂರ್ನಿಯಲ್ಲಿ ಭಾನುವಾರ (ಅ.8) ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲೂ ಜಾರ್ವೊ ಟೀಮ್ ಇಂಡಿಯಾ ಜರ್ಸಿ ತೊಟ್ಟು ಅಂಗಣ ಪ್ರವೇಶಿಸಿದ್ದರು. ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸಲುವಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ. ಆದರೂ ಸೆಕ್ಯೂರಿಟಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಜಾರ್ವಿ ಚೆಪಾಕ್‌ನ ಅಂಗಣ ಪ್ರವೇಶ ಮಾಡಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್‌ ಸರಣಿ ವೇಳೆ ಈ ಜಾರ್ವೋ 69 ವ್ಯಕ್ತಿ ಭಾರತೀಯ ತಂಡದ ಜೆರ್ಸಿ ಧರಿಸಿಕೊಂಡು ಮೈದಾನಕ್ಕೆ ನುಗ್ಗಿದ್ದರು. ತಾನು ಭಾರತದ ಆಟಗಾರ ತಾನೂ ಸಹ ಕ್ರಿಕೆಟ್ ಆಡಬೇಕು ಎಂದು ಮೈದಾನಕ್ಕೆ ನುಗ್ಗಿದ್ದರು. ಆ ಬಳಿಕ ಅವರು ಜಾರ್ವೋ 69 ಎಂದೇ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಫೇಮಸ್ ಆಗಿದ್ದರು.

ಇದೀಗ ಇದೇ ಜಾರ್ವೋ 69 ಎಂಬ ವ್ಯಕ್ತಿ ವಿಶ್ವಕಪ್‌ 2023ಗೂ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಜಾರ್ವೋ ಅವರ ಬಳಿ ವಿರಾಟ್ ಕೊಹ್ಲಿ ಕೆಲ ಸಮಯ ಮಾತನಾಡಿಸಿ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಲಾಯಿತು. ವೈರಲ್ ಆಗಿರುವ ಚಿತ್ರದಲ್ಲಿ, ಭಾರತದ ಸಹಾಯಕ ಸಿಬ್ಬಂದಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯುತ್ತಿರುವುದನ್ನು ಫೋಟೊದಲ್ಲಿ ಕಾಣಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು