Bengaluru 27°C
Ad

ನಾಳೆ (22) ಆರ್‌‌ಸಿಬಿ ಮತ್ತು ರಾಜಸ್ಥಾನ್‌ ತಂಡ ಮುಖಾಮುಖಿ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಪ್ಲೇ ಆಫ್​​​ ಕಾಳಗಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ನಡೆಯುತ್ತಿರೋ ಮೊದಲ ಕ್ವಾಲಿಫೈರ್​ ಪಂದ್ಯದಲ್ಲಿ ಕೆಕೆಆರ್​​, ಹೈದರಾಬಾದ್​​​ ತಂಡಗಳು ಸೆಣಸಾಡುತ್ತಿವೆ. ನಾಳೆ ಅಂದರೆ 22ನೇ ತಾರೀಕು ಆರ್‌‌ಸಿಬಿ ಮತ್ತು ರಾಜಸ್ಥಾನ್‌ ತಂಡಗಳು ಮುಖಾಮುಖಿ ಆಗಲಿದೆ.

ಆರ್​​ಸಿಬಿ ಮೊದಲಾರ್ಧ ಸೀಸನ್​​ನಲ್ಲಿ ಸೋತು ಸುಣ್ಣವಾಗಿತ್ತು. ಅರ್ಧ ಸೀಸನ್​​ ಬಳಿಕ ಆರ್​​​ಸಿಬಿ ತಂಡಕ್ಕೆ ಲಕ್​​​ ಒಲಿದು ಬಂತು. ಲಕ್​ ಒಲಿದಿದ್ದೇ ತಡ ಒಂದೇ ಒಂದು ಪಂದ್ಯದಲ್ಲೂ ಸೋಲದೆ ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದೆ. ಆರ್​​ಸಿಬಿ ತಂಡದ ರೋಚಕ ಜರ್ನಿಯಲ್ಲಿ ವಿರಾಟ್​ ಕೊಹ್ಲಿ ಬೆಂಗಳೂರು ಪಾಲಿಗೆ ಲಕ್ಕಿ ಚಾರ್ಮ್‌ ಆಗಿದ್ದಾರೆ.

ತನ್ನ ಅದ್ಭುತ ಬ್ಯಾಟಿಂಗ್​​ನಿಂದ ಕೊಹ್ಲಿಯನ್ನು ಇಂದು ಪ್ಲೇ ಆಫ್​ಗೆ ಕೊಂಡೊಯ್ದಿದ್ದಾರೆ. ಈ ಮಧ್ಯೆ ವಿರಾಟ್​ ಕೊಹ್ಲಿ ಮಾತಾಡಿರೋ ಒಂದು ವಿಡಿಯೋ ವೈರಲ್​ ಆಗಿದೆ. ಒಂದು ಸಂದರ್ಭದಲ್ಲಿ ವಿರಾಟ್​ ಕೊಹ್ಲಿಗೆ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ನಿಂದ ಬಿಗ್​ ಆಫ್​​ ಬಂದಿತ್ತಂತೆ.

ಈ ಬಗ್ಗೆ ಮಾತಾಡಿರೋ ಕೊಹ್ಲಿ, ನನಗೆ ದೊಡ್ಡ ದೊಡ್ಡ ತಂಡಗಳಿಂದಲೇ ಬಿಗ್​ ಆಫರ್​ ಬಂದಿತ್ತು. ನಾನು ಆಗಲೂ ಆರ್​​ಸಿಬಿ ಬಿಡೋ ಬಗ್ಗೆ ಯೋಚನೆ ಮಾಡಲಿಲ್ಲ. ನನ್ನಲ್ಲಿ ಮೊದಲು ನಂಬಿಕೆ ಇಟ್ಟಿದ್ದು ಆರ್​​ಸಿಬಿ. ಹಾಗಾಗಿ ನಾನು ಆರ್​ಸಿಬಿಗೆ ದ್ರೋಹ ಮಾಡಲ್ಲ ಎಂದರು.

Ad
Ad
Nk Channel Final 21 09 2023
Ad