Bengaluru 22°C
Ad

ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಮಹಿಳಾ ತಂಡ

ಬ್ಯಾಟಿಂಗ್​​ನಲ್ಲಿ ಶಫಾಲಿ ವರ್ಮಾ ಅವರ ದಾಖಲೆಯ ದ್ವಿಶತಕ 205, ಸ್ಮೃತಿ ಮಂಧಾನ ಬಾರಿಸಿದ ಅಮೋಘ ಶತಕ 149 ಹಾಗೂ ಸ್ನೆಹ್ ರಾಣಾ ಅವರ ವಿಶ್ವ ದಾಖಲೆಯ 10 ವಿಕೆಟ್​ಗಳ ನೆರವು ಪಡೆದ ಟೀಂ ಇಂಡಿಯಾ ಮಹಿಳಾ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ.

ಚೆನ್ನೈ: ಬ್ಯಾಟಿಂಗ್​​ನಲ್ಲಿ ಶಫಾಲಿ ವರ್ಮಾ ಅವರ ದಾಖಲೆಯ ದ್ವಿಶತಕ 205, ಸ್ಮೃತಿ ಮಂಧಾನ ಬಾರಿಸಿದ ಅಮೋಘ ಶತಕ 149 ಹಾಗೂ ಸ್ನೆಹ್ ರಾಣಾ ಅವರ ವಿಶ್ವ ದಾಖಲೆಯ 10 ವಿಕೆಟ್​ಗಳ ನೆರವು ಪಡೆದ ಟೀಂ ಇಂಡಿಯಾ ಮಹಿಳಾ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ.

Ad
300x250 2

ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗೆ 37 ರನ್​​ಗಳ ಗುರಿ ಪಡೆದಿದ್ದ ಭಾರತ 9.2 ಓವರ್​​ಗಳಲ್ಲಿ ವಿಜಯ ದಾಖಲಿಸಿತು. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ರನ್ ​ಗಳಿಸಿ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ಪ್ರೀತ್ ಬಳಗ ಬೃಹತ್​ ಮೊತ್ತವನ್ನು ಪೇರಿಸಿತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ದಾಖಲಿಸಿತು ಇದು ಮಹಿಳಾ ಟೆಸ್ಟ್​ ಕ್ರಿಕೆಟ್​​ನಲ್ಲಿ ವಿಶ್ವದಾಖಲೆಯ ಮೊತ್ತ.

ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಮಹಿಳೆಯರ ಬಳಗ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಬಾರಿಸಿ ಆಲ್ಔಟ್ ಆಯಿತು. 337 ರನ್​ಗಳ ಹಿನ್ನಡೆಯೊಂದಿಗೆ ಫಾಲೋ ಆನ್​ಗೆ ಗುರಿಯಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ, 373 ಗಳಿಸಿಇತು. ಭಾರತ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

 

 

 

Ad
Ad
Nk Channel Final 21 09 2023
Ad