Ad

ಸೂರ್ಯ ಕುಮಾರ್​ ಹಿಡಿದ ಕ್ಯಾಚ್​ ಬಗ್ಗೆ ಪ್ರಶ್ನಿಸಿ ಐಸಿಸಿಗೆ ಪಾಕ್​ ವರದಿಗಾರನಿಂದ ಮನವಿ

Shaun Pollock

ನವದೆಹಲಿ: ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದಾಗಿನಿಂದ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಆ ಒಂದು ವಿಡಿಯೋ ವೈರಲ್ ಆಗಿರುವುದು.

Ad
300x250 2

ಟಿ20 ವಿಶ್ವಕಪ್​ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಚೆಂಡನ್ನು ಆಫ್ರಿಕಾದ ಸ್ಟಾರ್​ ಆಟಗಾರ ಡೇವಿಡ್ ಮಿಲ್ಲರ್ ಬಲವಾಗಿ ಹೊಡೆದರು.

ಚೆಂಡು ಗಾಳಿಯಲ್ಲಿ ಹಾರಿ ಹೋಗಿದ್ದನ್ನು ನೋಡಿ ಬಹುತೇಕರು ಅದು ಸಿಕ್ಸರ್​ ಆಗುತ್ತದೆ ಎಂದು ಭಾವಿಸಿದ್ದರು. ಆದರೆ, ಸೂರ್ಯಕುಮಾರ್​ ಯಾದವ್​ ಅವರು ಸೂಪರ್​ ಮ್ಯಾನ್​ನಂತೆ ಅದ್ಭುತವಾಗಿ ಕ್ಯಾಚ್​ ಹಿಡಿಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಒಂದು ವೇಳೆ ಸೂರ್ಯ ಈ ಕ್ಯಾಚ್ ಬಿಟ್ಟಿದ್ದರೆ, ಟೀಮ್​ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿರಲಿಲ್ಲ.

ಆದರೆ, ಸೂರ್ಯಕುಮಾರ್​ ಯಾದವ್​ ಹಿಡಿದ ಅತ್ಯಾಕರ್ಷಕ ಕ್ಯಾಚ್ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ. ಹೌದು. . ಪಾಕಿಸ್ತಾನದ ಖ್ಯಾತ ಕ್ರೀಡಾ ಪತ್ರಕರ್ತ ಅರ್ಫಾ ಫಿರೋಜ್, ಬುಮ್ರಾ ಅವರ ಬೌಲಿಂಗ್ ಆಕ್ಷನ್ ಪರಿಶೀಲಿಸಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿದ್ದಾರೆ.

ಐಸಿಸಿಯು ಪಾಕಿಸ್ತಾನದ ಬೌಲರ್‌ಗಳ ವಿರುದ್ಧ ಆಗಾಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಪಾಕಿಸ್ತಾನಿ ಬೌಲರ್ ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಿದರೆ, ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ. ಆದ್ದರಿಂದ, ಜಸ್​ಪ್ರೀತ್ ಬುಮ್ರಾ ಅವರ ವಿಚಿತ್ರ ಬೌಲಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಐಸಿಸಿ ನಿಯಮಗಳ ಪ್ರಕಾರ ಜಸ್​ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಏಕೆಂದರೆ ಅವರ ಬೌಲಿಂಗ್ ಆಕ್ಷನ್​ನಲ್ಲಿ ಅನುಮಾನಗಳಿದ್ದು, ಹೀಗಾಗಿಯೇ ಅವರು ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಅರ್ಫಾ ಫಿರೋಜ್ ಅಭಿಪ್ರಾಯಪಟ್ಟಿದ್ದಾರೆ.

 

Ad
Ad
Nk Channel Final 21 09 2023
Ad