ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕಠಿಣ ಪರಿಶ್ರಮ, ಯೋಜನೆ ಮತ್ತು ಪ್ರಯತ್ನಗಳ ಆಧಾರದ ಮೇಲೆ ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಭಾರತದ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ. ಇದರೊಂದಿಗೆ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಹೀಗಾಗಿ ಇಸ್ರೋದ ಈ ಐತಿಹಾಸಿಕ ಯಶಸ್ಸನ್ನು ಇಡೀ ದೇಶವೇ ಹಬ್ಬದಂತೆ ಆಚರಿಸುತ್ತಿದೆ. ಇಂತಹ ಮಹಾನ್ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಎಲ್ಲರೂ ಅಭಿನಂದಿಸಿದ್ದು, ಟೀಂ ಇಂಡಿಯಾದ ಆಟಗಾರರು ಕೂಡ ಇಸ್ರೋ ವಿಜ್ಞಾನಿಗಳನ್ನು ಈ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದ್ದಾರೆ.
3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ಅಲ್ಲೇ ಚಂದ್ರಯಾನ್ 3ರ ಯಶಸ್ಸನ್ನು ಕಣ್ತುಂಬಿಕೊಂಡಿತು. ಸರಣಿಯ 3ನೇ ಮತ್ತು ಕೊನೇ ಪಂದ್ಯಕ್ಕೂ ಮುನ್ನ ಡಬ್ಲಿನ್ ಮೈದಾನದಲ್ಲಿದ್ದ ಇಂಡಿಯಾ ಪ್ಲೇಯರ್ಸ್, ಅಲ್ಲೇ ಟಿವಿಯಲ್ಲಿ ಭಾರತದ ಬಂಗಾರದ ಕ್ಷಣವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
🎥 Witnessing History from Dublin! 🙌
The moment India's Vikram Lander touched down successfully on the Moon's South Pole 🚀#Chandrayaan3 | @isro | #TeamIndia https://t.co/uIA29Yls51 pic.twitter.com/OxgR1uK5uN
— BCCI (@BCCI) August 23, 2023