ಐಸಿಸಿ ಟಿ-20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ವಿಂಡೀಸ್ ತಂಡ 8 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ.
ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಂಡ್ಲ ಸಿಮನ್ಸ್ ಹಾಗೂ ಇವಿನ್ ಲೆವಿಸ್ ನಿಧಾನಗತಿಯ ಆರಂಭ ನೀಡಿದರು. ಆದರೆ, ಸಿಮನ್ಸ್ ನಿಧಾನ ಗತಿಯ ಬ್ಯಾಟಿಂಗ್ ನಡೆಸಿ 35 ಬಾಲ್ನಲ್ಲಿ ಕೇವಲ 16 ರನ್ ಗಳಿಸಿದರು.
ಆದರೆ, ಇನ್ನೋರ್ವ ಆಟಗಾರ ಲೆವಿಸ್ ಅಬ್ಬರದ ಬ್ಯಾಟಿಂಗ್ ನಡೆಸಿ 35 ಎಸೆತದಲ್ಲಿ 6 ಸಿಕ್ಸರ್, 3 ಬೌಂಡರಿ ನೆರವಿನಿಂದ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸ್ಗಳಿದ ಪೂರನ್ 12 (7), ಕ್ರಿಸ್ ಗೇಲ್ 12 (12), ಆಂಡ್ರೆ ರಸೆಲ್ 5 (4), ಶಿಮ್ರಾನ್ ಹೆಟ್ಮಾಯರ್ 1 (2) ಪೊಲಾರ್ಡ್ 26 (20), ಹೇಡನ್ ವಾಲ್ಷ್ 0 (1) ಬ್ರಾವೊ ಔಟಾಗದೇ 8 (5) ರನ್ಗಳಿಸಿದರು.
ನಿಗದಿತ 20 ಓವರ್ ಅಂತ್ಯಕ್ಕೆ ವಿಂಡೀಸ್ ತಂಡ 8 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ.ದಕ್ಷಿಣ ಆಫ್ರಿಕಾ ಪರ ಡ್ವೇನಿ ಪ್ರಿಟೋರಿಸ್ 3 ಕೇಶವ್ ಮಹರಾಜ್ 2, ಕಗಿಸೋ ರಬಡಾ, ಅನ್ರಿಚ್ ನೊರ್ಟ್ಜ್ ತಲಾ ಒಂದು ವಿಕೆಟ್ ಪಡೆದರು.