News Karnataka Kannada
Tuesday, April 30 2024
ಕ್ರೀಡೆ

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ತನ್ನ 9 ವಿಕೆಟ್​ ನಷ್ಟಕ್ಕೆ 118 ರನ್​

Cricket Ball 10082021
Photo Credit :

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ತನ್ನ 9 ವಿಕೆಟ್​ ನಷ್ಟಕ್ಕೆ 118 ರನ್​ ಗಳಿಸಿದೆ. ಟಂಬಾ ಬವುಮ      (12 ರನ್​) ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರೆ, ಅವರೊಂದಿಗೆ ಕ್ರೀಸ್​ಗೆ ಇಳಿದಿದ್ದ ನಾಯಕ ಕ್ವಿಂಟನ್ ಡಿ ಕಾಕ್ ಕೇವಲ 7 ರನ್​ ಗಳಿಸಿ ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್​ ದಾಳಿಗೆ ಔಟ್​ ಆಗುವ ಮೂಲಕ ಪೆವಿಲಿಯನ್​ಗೆ ತೆರಳಿದರು.

ಬಳಿಕ ಕ್ರೀಸ್​ಗೆ ಇಳಿದ ರಾಸ್ ವ್ಯಾನ್ ಡಸೆನ್ ಕೇವಲ 2 ರನ್​ ಗಳಿಸಿ ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರ ನಡೆದರು. ಏಡನ್ ಮಾರ್ಕ್ರಮ್ (40) ಅವರ ಜೊತೆಯಾದ ಹೆನ್ರಿಕ್ ಕ್ಲಾಸೆನ್ (13) ಸ್ವಲ್ಪ ಕಾಲ ಕ್ರೀಸ್​ನಲ್ಲಿ ಭರಸವೆಯ ಬ್ಯಾಟಿಂಗ್​ ಮಾಡಿದರು.

10 ಓವರ್‌ಗಳು ಮುಗಿದಾಗ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್​ ಕಳೆದುಕೊಂಡು 59 ರನ್​ ಗಳಿಸಿತ್ತು.ಹೆನ್ರಿಕ್ ಕ್ಲಾಸೆನ್ ಬಳಿಕ ಬ್ಯಾಟಿಂಗ್​ ಮಾಡಲು ಬಂದ ಡೇವಿಡ್ ಮಿಲ್ಲರ್ (16) ಹಾಗೂ ಡ್ವೇನ್ ಪ್ರಿಟೋರಿಯಸ್ (1) ಅಲ್ಪ ಮೊತ್ತದ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು.

ಬಳಿಕ ಬಂದ ದಕ್ಷಿಣ ಆಫ್ರಿಕಾ ತಂಡದ ಯಾವುದೇ ಆಟಗಾರರು ಬಹಳ ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ, 20 ಓವರ್​ಗಳಲ್ಲಿ ಕ್ವಿಂಟನ್ ಡಿ ಕಾಕ್ ಬಳಗ 118 ರನ್​ ಗಳಿಸಲು ಶಕ್ತವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು