ಬರ್ಮಿಂಗ್ಹ್ಯಾಮ್: ಭಾರತದ ಶ್ರೀಹರಿ ನಟರಾಜ್ ಅವರು ಪುರುಷರ ವಿಭಾಗದ 100 ಮೀ. ಬ್ಯಾಕ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
ಬೆಂಗಳೂರಿನ 21 ವರ್ಷದ ಈಜುಪಟು ಶುಕ್ರವಾರ ತಾವು ಪಾಲ್ಗೊಂಡ ಹೀಟ್ಸ್ನಲ್ಲಿ 54.68 ಸೆ.ಗಳೊಂದಿಗೆ ಮೂರನೇ ಸ್ಥಾನ ಹಾಗೂ ಒಟ್ಟಾರೆಯಾಗಿ ಐದನೇ ಸ್ಥಾನ ಪಡೆದು ಸೆಮಿಗೆ ಅರ್ಹತೆ ಗಿಟ್ಟಿಸಿಕೊಂಡರು.
ಶ್ರೀಹರಿ ತಮ್ಮ ವೈಯಕ್ತಿಕ ಶ್ರೇಷ್ಠ (53.77 ಸೆ.) ಸಮಯ ಕಂಡುಕೊಂಡಿದ್ದರೆ, ಇಲ್ಲಿ ಅಗ್ರಸ್ಥಾನ ಪಡೆದು ಸೆಮಿ ಪ್ರವೇಶಿಸುತ್ತಿದ್ದರು. ಹೀಟ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಪೀಟರ್ ಕೊಯೆಟ್ಜ್ (53.91 ಸೆ.) ಮೊದಲ ಸ್ಥಾನ ಪಡೆದರು,