News Karnataka Kannada
Sunday, April 21 2024
Cricket
ಕ್ರೀಡೆ

ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಗೆದ್ದ ಭಾರತದ ಸ್ಟಾರ್‌ ಶೆಟ್ಲರ್‌ ಪಿವಿ ಸಿಂಧು

Badminton: Badminton Association apologises to PV Sindhu
Photo Credit : Twitter

ಭಾರತದ ಸ್ಟಾರ್‌ ಶೆಟ್ಲರ್‌ ಪಿವಿ ಸಿಂಧು ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳೆಯರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕಿತಯ ಆಟಗಾರ್ತಿ ಚೀನಾದ ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ಸಿಂಧು ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ಫೈನಲ್‌ ಸೆಣಸಾಟದಲ್ಲಿ ಒಲಂಪಿಕ್‌ ಪದಕ ವಿಜೇತೆ ಸಿಂಧು 22ರ ಹರೆಯದ ಆಟಗಾರ್ತಿ ವಾಂಗ್ ವಿರುದ್ಧ 21-9, 11-21, 21-15 ರಲ್ಲಿ ಗೆದ್ದು ಬೀಗಿದರು. ಕೆಲದಿನಗಳ ಹಿಂದೆ ನಡೆದಿದ್ದ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ನಲ್ಲಿಯೂ ಸಿಂಧು ಚೀನಾದ ಆಟಗಾರ್ತಿ ವಾಂಗ್‌ ರನ್ನು ಸೋಲಿಸಿದ್ದರು.

ಈ ಗೆಲುವಿನ ಮೂಲಕ ಸಿಂಧು ಸಿಂಗಾಪೂರ ಓಪನ್‌ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಈ ಮೊದಲು 2010ರಲ್ಲಿ ಸೈನಾ ನೆಹ್ವಾಲ್‌ ಜಯಭೇರಿ ಬಾರಿಸಿದ್ದರು. ಪುರುಷರ ವಿಭಾಗದಲ್ಲಿ ಸಾಯಿಪ್ರಣೀತ್(‌ 2017) ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ಆಟಗಾರ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು