Bengaluru 24°C
Ad

ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್​ವುಡ್​ ರಾಜೀನಾಮೆ!

ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ ಏಕಾಏಕಿ ರಾಜೀನಾಮೆ ಪಡೆದಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಅವರು ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ ಏಕಾಏಕಿ ರಾಜೀನಾಮೆ ಪಡೆದಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಅವರು ರಾಜೀನಾಮೆ ನೀಡಿದ್ದಾರೆ.

ಶ್ರೀಲಂಕಾದೊಂದಿಗಿನ ಸಿಲ್ವರ್​ವುಡ್​ ಅವರ ಅಧಿಕಾರಾವಧಿ ಉತ್ತಮವಾಗಿ ಪ್ರಾರಂಭಗೊಂಡಿದ್ದರು. ತಂಡವು 2022 ರ ಟಿ 20 ಏಷ್ಯಾ ಕಪ್​​ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತ್ತು. 2023 ರಲ್ಲಿ 50 ಓವರ್​ಗಳ ಏಷ್ಯಾ ಕಪ್​ನಲ್ಲಿ ಫೈನಲ್​ಗೆ ಅರ್ಹತೆ ಪಡೆದಿತ್ತು.

ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು.

ಅಂತಾರಾಷ್ಟ್ರೀಯ ಕೋಚ್ ಆಗಿರುವುದು ಎಂದರೆ ಪ್ರೀತಿಪಾತ್ರರಿಂದ ದೂರವಿರುವುದು ಎಂದರ್ಥ. ನನ್ನ ಕುಟುಂಬದೊಂದಿಗೆ ಸುದೀರ್ಘ ಸಂಭಾಷಣೆಯ ನಂತರ ಮತ್ತು ಭಾರವಾದ ಹೃದಯದಿಂದ, ನಾನು ಮನೆಗೆ ಮರಳಲು ಮತ್ತು ಒಟ್ಟಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಉತ್ತಮ ನಿರ್ಧಾರಕ್ಕೆ ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ “ಎಂದು ಸಿಲ್ವರ್​ ವುಡ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Ad
Ad
Nk Channel Final 21 09 2023
Ad