ಐಸಿಸಿ ಏಕದಿನ ವಿಶ್ವಕಪ್ 2023 ಆರಂಭಕ್ಕೆ ಕೇವಲ ಎರಡು ತಿಂಗಳುಗಳಿರುವಾಗ, ಕೆಲ ಭಾರತೀಯ ಆಟಗಾರರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತ ಕಂಡಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿಯ ಮುಕ್ತಾಯದ ನಂತರ, ಆರಂಭಿಕರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಕ್ರಮವಾಗಿ 2 ಮತ್ತು 9 ಸ್ಥಾನಗಳನ್ನು ಹೆಚ್ಚಿಸಿದ್ದಾರೆ.
ಟೀಮ್ ಇಂಡಿಯಾದ ಯುವ ಜೋಡಿ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2-1 ಅಂತರದಿಂದ ಏಕದಿನ ಸರಣಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಜೋಡಿಯು ಮೂರು ಪಂದ್ಯಗಳಲ್ಲಿ ಒಟ್ಟು 310 ರನ್ ಕಲೆಹಾಕಿದೆ
ಬುಧವಾರ ಐಸಿಸಿ ನೂತನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗಿಲ್-ಕಿಶನ್ ವೃತ್ತಿಜೀವನದ ಉನ್ನತ ರೇಟಿಂಗ್ ಹೊಂದಿದರು. ಗಿಲ್(743 ರೇಟಿಂಗ್ ಪಾಯಿಂಟ್ ) ಎರಡು ಸ್ಥಾನಗಳನ್ನು ಹೆಚ್ಚಿನ ಒಟ್ಟಾರೆಯಾಗಿ ಐದನೇ ಸ್ಥಾನಕ್ಕೆ ಏರಿದ್ದಾರೆ.
ಐಸಿಸಿ ಏಕದಿನ ಬ್ಯಾಟರ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (886) ಮೊದಲ ಸ್ಥಾನದಲ್ಲಿದ್ದಾರೆ.