News Karnataka Kannada
Thursday, May 02 2024
ಕ್ರೀಡೆ

ಐಪಿಎಲ್​ಗೆ ವಿದಾಯ ಹೇಳ್ತಾರ ಧೋನಿ: ಭಾವನಾತ್ಮಕ ವಿಡಿಯೋ ಹಂಚಿಕೊಂಡ ಸಿಎಸ್​​ಕೆ

Ms doni ipl
Photo Credit : Twitter

16ನೇ ಆವೃತ್ತಿಯ ಐಪಿಎಲ್ ಮುಗಿದು ಎರಡು ವಾರಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವುದರೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ತೆರೆ ಬಿದ್ದಿತ್ತು. ಅಲ್ಲದೆ ಈ ಆವೃತ್ತಿ ಎಂಎಸ್ ಧೋನಿ ಅವರ ಕೊನೆಯ ಆವೃತ್ತಿ ಎಂಬ ಮಾತು ಟೂರ್ನಿ ಆರಂಭಕ್ಕೂ ಮುನ್ನವೇ ಕೇಳಿಬರಲಾರಂಭಿಸಿತ್ತು.

ಆದರೆ ಈ ಊಹಪೋಹಗಳಿಗೆ ಲೀಗ್​ನ ಕೊನೆಯಲ್ಲಿ ಉತ್ತರಿಸಿದ್ದ ಧೋನಿ, ಅದರ ಬಗ್ಗೆ ಚಿಂತಿಸಲು ನನಗೆ ಇನ್ನೂ 7 ರಿಂದ 8 ತಿಂಗಳ ಕಾಲಾವಕಾಶವಿದೆ ಎಂದಿದ್ದರು.

ಆದರೆ ಇದೀಗ ಸಿಎಸ್​ಕೆ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧೋನಿಯ ಬಗ್ಗೆ 33 ಸೆಕೆಂಡ್​ಗಳ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದು, ಧೋನಿ ಐಪಿಎಲ್​ಗೆ ನಿವೃತ್ತಿ ಹೇಳಿದರಾ ಎಂಬ ಅನುಮಾನ ಕಾಡಲಾರಂಭಿಸಿದೆ. ಇದು ಅಭಿಮಾನಿಗಳನ್ನು ಮತ್ತೆ ಭಾವುಕರನ್ನಾಗಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು