News Karnataka Kannada
Saturday, April 27 2024
ಕ್ರೀಡೆ

ಏಷ್ಯನ್ ಅಂಡರ್ 18 ಅಥ್ಲೆಟಿಕ್ಸ್: ಭಾರತಕ್ಕೆ ಒಂದು ಚಿನ್ನ, ಆರು ಬೆಳ್ಳಿ ಪದಕ

Asian U-18 Athletics: One gold, six silver medals for India
Photo Credit : News Kannada

ತಾಷ್ಕೆಂಟ್ (ಉಜ್ಬೇಕಿಸ್ತಾನ್): ಏಷ್ಯನ್ ಅಂಡರ್ 18 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಮತ್ತು ಅಂತಿಮ ದಿನದಂದು ಭಾರತವು ಒಂದು ಚಿನ್ನ, ಐದು ಆರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಬಾಲಕಿಯರ ತಂಡ 400 ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದೆ. ಮೆಡ್ಲೆ ರಿಲೇಯಲ್ಲಿ ಭಾರತದ ಬಾಲಕಿಯರ ತಂಡ ಚಿನ್ನ ಗೆದ್ದರೆ, ಬಾಲಕರ ತಂಡ ಬೆಳ್ಳಿ ಪದಕ ಪಡೆಯಿತು.

ಭಾನುವಾರ ನಡೆದ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬಾಪಿ ಹನ್ಸ್ಡಾ ಅವರು ಪುರುಷರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ 200 ಮೀ ಓಟದಲ್ಲಿ ರೆಜೋನಾ ಮಲ್ಲಿಕ್ ಹೀನಾ ಬೆಳ್ಳಿ ಗೆದ್ದರು.

ಮೊಹೂರ್ ಮುಖರ್ಜಿ ಹೆಪ್ಟಾಥ್ಲಾನ್‌ನಲ್ಲಿ ಬೆಳ್ಳಿ ಗೆದ್ದರೆ, ರಿತಿಕ್ ಡಿಸ್ಕಸ್‌ನಲ್ಲಿ 54.03 ಮೀ ಎಸೆದು ಎರಡನೇ ಸ್ಥಾನ ಪಡೆದರು. ಬಾಲಕರ 2000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಸುಮಿತ್ ರಾಠಿ 5 ನಿಮಿಷ 58.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು. ಅನುಪ್ರಿಯಾ ಬಾಲಕಿಯರ ಶಾಟ್‌ಪುಟ್‌ನಲ್ಲಿ 16.37 ಮೀ ದೂರದಲ್ಲಿ ಕಂಚು ಗೆದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು