News Karnataka Kannada
Sunday, April 28 2024
ಕ್ರೀಡೆ

ಮ್ಯಾಚ್ ಫಿಕ್ಸಿಂಗ್‌ ಆರೋಪ: ಬಿಪಿಎಲ್​ನಿಂದ ಶೋಯೆಬ್ ಮಲಿಕ್ ಕಿಕ್ ಔಟ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ದೂರವಾಗಿ ಮೂರನೇ ಬಾರಿಗೆ ವಿವಾಹವಾದ ನಂತರ ಕಳೆದೊಂದು ವಾರದಿಂದ ಎಲ್ಲಡೆ ಚರ್ಚೆಯಲ್ಲಿದ್ದಾರೆ.
Photo Credit :

ಮುಂಬೈ:  ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ದೂರವಾಗಿ ಮೂರನೇ ಬಾರಿಗೆ ವಿವಾಹವಾದ ನಂತರ ಕಳೆದೊಂದು ವಾರದಿಂದ ಎಲ್ಲಡೆ ಚರ್ಚೆಯಲ್ಲಿದ್ದಾರೆ.

ಇದೀಗ ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ಬಲೆಗೆ ಸಿಲುಕಿ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಪಾಕಿಸ್ತಾನಿ ಕ್ರಿಕೆಟಿಗ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಫ್ರಾಂಚೈಸಿ ತಂಡ ಫಾರ್ಚೂನ್ ಬಾರಿಶಾಲ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಒಪ್ಪಂದವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಹೆಸರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ಹಲವು ದೊಡ್ಡ ಹೆಸರುಗಳು ಇದರಲ್ಲಿ ಮುಂದೆ ಬಂದಿವೆ. ಇದರಿಂದ ಒಬ್ಬ ನಾಯಕ ಮತ್ತು ಇಬ್ಬರು ಬೌಲರ್‌ಗಳ ವೃತ್ತಿಜೀವನ ಹಾಳಾಗಿದೆ.

ಇದೀಗ ಮಾಜಿ ನಾಯಕ ಶೋಯೆಬ್ ಮಲಿಕ್ ಹೆಸರು ಫಿಕ್ಸಿಂಗ್ ಗೂ ತಳುಕು ಹಾಕಿಕೊಂಡಂತಿದೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಮಯದಲ್ಲಿ, ಅವರು ಖುಲ್ನಾ ಟೈಗರ್ಸ್ ವಿರುದ್ಧ ಒಂದೇ ಓವರ್‌ನಲ್ಲಿ ಮೂರು ನೋ ಬಾಲ್‌ಗಳನ್ನು ಎಸೆದರು ಮತ್ತು ಇದರಿಂದಾಗಿ, ಅವರ ವಿರುದ್ಧ ಫಿಕ್ಸಿಂಗ್ ಶಂಕೆ ವ್ಯಕ್ತವಾಗುತ್ತಿದೆ. ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಶಂಕೆಯಿಂದಾಗಿ, ಫಾರ್ಚೂನ್ ಬಾರಿಶಾಲ್ ತಂಡವು ಅವರ ಒಪ್ಪಂದವನ್ನು ರದ್ದು ಮಾಡಿದೆ.

ಫಾರ್ಚೂನ್ ಬಾರಿಶಾಲ್ ತಂಡದ ಪರ ಕಣಕ್ಕಿಳಿಯುತ್ತಿರುವ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು