News Karnataka Kannada
Saturday, May 11 2024
ಕ್ರೀಡೆ

ಕೈ ಇಲ್ಲದ ಪ್ಯಾರಾ ಆರ್ಚರ್ ಶೀತಲ್‌ ದೇವಿಗೆ ವಿಶ್ವ ನಂ.1 ಪಟ್ಟ

ಎರಡೂ ಕೈಗಳಿಲ್ಲದೇ ಇದ್ದರೂ ಪ್ಯಾರಾ ಆರ್ಚರಿಯಲ್ಲಿ ಸಾಧನೆ ಮಾಡುತ್ತಿರುವ ಭಾರತದ 16 ವರ್ಷದ ಶೀತಲ್ ದೇವಿ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Photo Credit : News Kannada

ನವದೆಹಲಿ: ಎರಡೂ ಕೈಗಳಿಲ್ಲದೇ ಇದ್ದರೂ ಪ್ಯಾರಾ ಆರ್ಚರಿಯಲ್ಲಿ ಸಾಧನೆ ಮಾಡುತ್ತಿರುವ ಭಾರತದ 16 ವರ್ಷದ ಶೀತಲ್ ದೇವಿ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಶೀತಲ್, ಮಂಗಳವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 230 ಅಂಕಗಳನ್ನು ಸಂಪಾದಿಸಿದ್ದು, 2 ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾರಾ ಏಷ್ಯಾಡ್‌ನಲ್ಲಿ 3 ಚಿನ್ನ ಗೆದ್ದಿದ್ದ ರಾಕೇಶ್ ಕುಮಾರ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಪಡೆದರೆ, ಸರಿತಾ 7 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ.

ಕೇವಲ 16ರ ಹರೆಯದ ಶೀತಲ್‌ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಆರ್ಚರಿ ಕ್ರೀಡೆಯಲಲಿ ಅಪ್ರತಿಮ ಸಾಧನೆಗೈದ ಸಾಧಕಿಯೆಂದೇ ಹೇಳಬಹುದು. ಜಮ್ಮುವಿನ ಕಿಶ್‌ ವಾರ್‌ ಜಿಲ್ಲೆಯ ಲಾಯಿಧರ್‌ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಹುಟ್ಟುವಾಗಲೇ ಫೊಕೊಮೀಲಿಯ ಕಾಯಿಲೆಗೆ ತುತ್ತಾಗಿದ್ದರು. ಈ ಕಾಯಿಲೆಯಿದ್ದವರಿಗೆ ಕೈ ಅಥವಾ ಕಾಲುಗಳ ಬೆಳವಣಿಗೆ ಇರುವುದಿಲ್ಲ್.‌ ಶೀತಲ್‌ ಅವರಿಗೆ ಎರಡೂ ಕೈಗಳು ಬೆಳೆಯದೇ ಹಾಗೇ ಜೀವನ ಸಾಗಬೇಕಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು