News Karnataka Kannada
Friday, May 17 2024
ಕ್ರೀಡೆ

ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ

Ronaldo
Photo Credit : Twitter

ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾದ ಅಲ್-ನಾಸ್ರ್‌ ಕ್ಲಬ್ ಸೇರಿದ ಬಳಿಕ ಚೊಚ್ಚಲ ಚಾಂಪಿಯನ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಅರಬ್ ಕ್ಲಬ್ ಚಾಂಪಿಯನ್‌ಶಿಪ್ ಕಪ್-2023 ನಲ್ಲಿ ಅಲ್-ನಾಸ್ರ್ ಮತ್ತು ಅಲ್-ಹಿಲಾಲ್ ನಡುವಿನ ಫೈನಲ್‌ ಪಂದ್ಯದಲ್ಲಿ ಭರ್ಜರಿ ಎರಡು ಗೋಲು ಸಿಡಿಸುವ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್-ನಾಸ್ರ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರೊನಾಲ್ಡೊ ಸೌದಿ ಅರೇಬಿಯಾದ ಕ್ಲಬ್‌ ಸೇರಿದ ಬಳಿಕ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಕಳೆದ ವರ್ಷ ರೊನಾಲ್ಡೋ ಸೌದಿ ಅರೇಬಿಯಾ ತಂಡ ಸೇರಿಕೊಂಡರು.

ಫೈನಲ್‌ ಪಂದ್ಯದಲ್ಲಿ ಗೆಲುವಿನ ಪ್ರಮುಖ ರೂವಾರಿಯಾಗಿದ್ದ ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ದಂತಕಥೆ ಗೆರ್ಡ್ ಮುಲ್ಲರ್‌ ಅವರನ್ನ ಹಿಂದಿಕ್ಕಿ ಅತಿಹೆಚ್ಚು ಹೆಡ್‌ ಗೋಲ್‌ಗಳನ್ನು (145) ಗಳಿಸಿದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ.

2022ರ ಡಿಸೆಂಬರ್‌ 31 ರಂದು ರೊನಾಲ್ಡೋ ಸೌದಿ ಅರೇಬಿಯಾದ ಅನ್‌ ನಾಸ್ರ್‌ ಕ್ಲಬ್‌ಗೆ ಸೇರಿಕೊಂಡರು. ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು