News Karnataka Kannada
Friday, May 10 2024
ಕ್ರೀಡೆ

ಎರಡನೇ ಟೆಸ್ಟ್ ಪಂದ್ಯ: ವಿಂಡೀಸ್ ನೆಲದಲ್ಲಿ ದಾಖಲೆ ಬರೆದ ಅಶ್ವಿನ್- ಜಡೇಜಾ ಜೋಡಿ

ashwin-ravindra-jadeja
Photo Credit :

ವೆಸ್ಟ್ ವಿಂಡೀಸ್: ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇದುವರೆಗೆ ಜೊತೆಯಾಗಿ 5 ವಿಕೆಟ್ ಉರುಳಿಸಿದು, ಟೆಸ್ಟ್ ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ.

ಭಾರತದ ಈ ಸ್ಟಾರ್ ಸ್ಪಿನ್ ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡುವ ಮೂಲಕ 500 ವಿಕೆಟ್‌ಗಳನ್ನು ಉರುಳಿಸಿದ ಟೀಂ ಇಂಡಿಯಾದ ಎರಡನೇ ಜೋಡಿ ಎನಿಸಿಕೊಂಡಿದೆ. ಟ್ರಿನಿಡಾಡ್ ಟೆಸ್ಟ್‌ನ 4 ನೇ ದಿನದಂದು ವೆಸ್ಟ್ ಇಂಡೀಸ್‌ ತಂಡದ ಎರಡು ವಿಕೆಟ್‌ ಪಡೆದ ಅಶ್ವಿನ್ ಈ ದಾಖಲೆ ಬರೆಯಲು ನೆರವಾದರು.

ಈ ಹಿಂದೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿ ಒಟ್ಟಿಗೆ ಆಡುವಾಗ 500 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಭಾರತೀಯ ಜೋಡಿಯಾಗಿತ್ತು. ಇದೀಗ ಈ ದಾಖಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವ ಅಶ್ವಿನ್ ಹಾಗೂ ಜಡೇಜಾ ಜೋಡಿ 49 ಟೆಸ್ಟ್‌ಗಳಲ್ಲಿ 500 ವಿಕೆಟ್​ ಉರುಳಿಸಿದೆ. ಈ ಜೊತೆ ಪಯಣದಲ್ಲಿ ಅಶ್ವಿನ್ 274 ವಿಕೆಟ್‌ಗಳನ್ನು ಪಡೆದ್ದರೆ, ಎಡಗೈ ಸ್ಪಿನ್ನರ್ ಜಡೇಜಾ 226 ವಿಕೆಟ್ ಉರುಳಿಸಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು