News Karnataka Kannada
Thursday, May 09 2024
ಕ್ರೀಡೆ

ಏಷ್ಯಾಕಪ್ ಫೈನಲ್: ಭಾರತಕ್ಕೆ ಕಠಿಣ ಗುರಿ ನೀಡಿದ ಪಾಕಿಸ್ತಾನ

India A vs Pakistan
Photo Credit : Twitter

ಶ್ರೀಲಂಕಾ: ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಎ ತಂಡವು ಬೃಹತ್ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಸೂಚಿಸುವಂತೆ ಪಾಕ್ ಆರಂಭಿಕರು ಇನಿಂಗ್ಸ್ ಆರಂಭಿಸಿದ್ದರು.

ಮೊದಲ ವಿಕೆಟ್​ಗೆ 121 ರನ್​ಗಳ ಜೊತೆಯಾಟವಾಡಿದ ಸೈಮ್ ಅಯ್ಯುಬ್ (59) ಹಾಗೂ ಫರ್ಹಾನ್ (65) ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಈ ಹಂತದಲ್ಲಿ ದಾಳಿಗಿಳಿದ ಮಾನವ್ ಸುತಾರ್ ಸೈಮ್ ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫರ್ಹಾನ್ ಕೂಡ ರನೌಟ್ ಆದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಒಮೈರ್ ಯೂಸುಫ್ 35 ರನ್​ಗಳ ಕಾಣಿಕೆ ನೀಡಿದರು. ಆದರೆ ಪಾಕ್ ತಂಡದ ಇನಿಂಗ್ಸ್​ನ ಗತಿಯನ್ನೇ ಬದಲಿಸಿದ್ದು ತಯ್ಯಬ್ ತಾಹಿರ್. ಸ್ಪೋಟಕ ಬ್ಯಾಟಿಂಗ್​ ಮೂಲಕ ಟೀಮ್ ಇಂಡಿಯಾ ಬೌಲರ್​ಗಳನ್ನು ದಂಡಿಸಿದ ತಯ್ಯಬ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಕೇವಲ 71 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 108 ರನ್​ಗಳಿಸಿದ್ದರು. ಪರಿಣಾಮ ನಿಗದಿತ 50 ಓವರ್​ಗಳಲ್ಲಿ ಪಾಕಿಸ್ತಾನ್ ಎ ತಂಡವು 8 ವಿಕೆಟ್​ ನಷ್ಟಕ್ಕೆ 352 ರನ್​ ಕಲೆಹಾಕಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು