ಮುಂಬಯಿ: ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಸಿದ ವಿಚಾರದಲ್ಲಿ ಸಮರ್ಥನೆ ನೀಡಿದ ತಂಡದ ಕೋಚ್ ಮಾರ್ಕ್ ಬೌಚರ್ಗೆ ರೋಹಿತ್ ಪತ್ನಿ ರಿತಿಕಾ ಟಾಂಗ್ ನೀಡಿದ್ದಾರೆ. ಇದರಲ್ಲಿ ಹಲವು ತಪ್ಪುಗಳಿವೆ ಎಂದು ಹೇಳುವ ಮೂಲಕ ರಿತಿಕಾ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಎನ್ನುವುದು ತುಂಬಾ ಭಾವನಾತ್ಮಕವಾಗಿರುತ್ತಾರೆ. ಈ ಭಾವನೆಗಳನ್ನು ದೂರವಿಡಿ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕ್ರಿಕೆಟಿಂಗ್ ನಿರ್ಧಾರ. ಬೇರೇನೂ ಇಲ್ಲ. ಬಹಳಷ್ಟು ಮಂದಿಗೆ ಇದು ಅರ್ಥವಾಗಿಲ್ಲ” ಎಂದು ಬೌಚರ್ ಹೇಳಿದ್ದರು.
ಮಾರ್ಕ್ ಬೌಚರ್ ಅವರ ಸಂದರ್ಶನಕ್ಕೆ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ ರೋಹಿತ್ ಶರ್ಮ ಪತ್ನಿ ರಿತಿಕಾ, ‘ಇದರಲ್ಲಿ ಹಲವು ತಪ್ಪುಗಳಿವೆ’ ಎಂದು ಹೇಳುವ ಮೂಲಕ ಪತಿಯನ್ನು ನಾಯಕತ್ವದಿಂದ ಕಿತ್ತು ಹಾಕಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ರೋಹಿತ್ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್ ಫ್ರಾಂಚೈಸಿಯು ಟ್ವಿಟರ್ನಲ್ಲಿ (ಎಕ್ಸ್) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿತ್ತು.
Ritika Sajdeh's comment on Mark Boucher's interview talking about Hardik Pandya taking over MI captaincy. (Smash Sports Podcast). pic.twitter.com/5sAAVa5xVu
— Mufaddal Vohra (@mufaddal_vohra) February 6, 2024