Bengaluru 27°C
Ad

ಚಿರಋಣಿ. . . ಎನ್ನುತ ಕೆನ್ಸಿಂಗ್ಟನ್​ ಪಿಚ್​ನ ಮಣ್ಣು- ಹುಲ್ಲು ತಿಂದ ರೋಹಿತ್ ಶರ್ಮಾ

Rohit

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್​ಗಳ ರೋಚಕ ಜಯ ಸಾಧಿಸಿತು. ಈ ರೋಚಕ ಗೆಲುವಿನ ಬೆನ್ನಲ್ಲೇ ಭಾವುಕರಾದ ರೋಹಿತ್ ಶರ್ಮಾ ಬಿಕ್ಕಿಳಿಸುತ್ತಾ ಕಣ್ಣೀರು ಹಾಕಿದರು.

Ad
300x250 2

ಈ ಕಣ್ಣೀರಿನೊಂದಿಗೆ ತನ್ನ ಬಹುಕಾಲದ ಕನಸು ಈಡೇರಿಸಿದ ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್​ಗೆ ನಮಿಸಿದರು. ಅಷ್ಟೇ ಅಲ್ಲದೆ ಪಿಚ್​ನಲ್ಲಿನ ಮಣ್ಣು ಹುಲ್ಲನ್ನು ಕಿತ್ತು ತಿನ್ನುವ ಮೂಲಕ ಸ್ಮರಣೀಯ ಗೆಲುವನ್ನು ನೀಡಿದ ಕೆನ್ಸಿಂಗ್ಟನ್ ಮೈದಾನದ ಋಣವನ್ನು ದೇಹಕ್ಕೆ ಸೇರಿಸಿಕೊಂಡರು. ಇದೀಗ ರೋಹಿತ್ ಶರ್ಮಾ ಅವರ ಈ ಭಾವುಕ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ನಾನು ಟಿ20 ಸ್ವರೂಪದೊಂದಿಗೆ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಈ ಸ್ವರೂಪಕ್ಕೆ ವಿದಾಯ ಹೇಳಲು ಸಕಾಲ. ಹೀಗಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.

https://x.com/aapkadharm/status/1807294889215848918/video/1

 

 

Ad
Ad
Nk Channel Final 21 09 2023
Ad