ಮುಂಬೈ: ವಿಶ್ವಕಪ್ ಸೋತಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಡ್ರೆಸ್ಸಿಂಗ್ ರೂಮ್ಗೆ ಹೆಜ್ಜೆ ಹಾಕಿದ್ದರು. ಪಂದ್ಯ ಮುಗಿದು 5 ದಿನ ಕಳೆದರೂ ಆ ಬೇಸರದಿಂದ ಹೊರಬಂದಿಲ್ಲ.
ಈ ಬಗ್ಗೆ ಸ್ವತಃ ರೋಹಿತ್ ಪುತ್ರಿ ಸಮೈರಾ ಹೇಳಿಕೆ ನೀಡಿದ್ದಾಳೆ ಎನ್ನಲಾಗುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬರು ಆಕೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ.
ನಿಮ್ಮ ತಂದೆ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಮಾತಿಗೆ ನಿಂತು ಮಾತನಾಡಿದ ಪುಟಾಣಿ, ಅವರು ರೂಮಿನಲ್ಲಿ ಇದ್ದಾರೆ. ಚೆನ್ನಾಗಿಯೇ ಇದ್ದಾರೆ. ಇನ್ನೊಂದು ತಿಂಗಳಲ್ಲಿ ನಗುತ್ತಾರೆ ಎಂದು ಕ್ಯೂಟ್ ಆಗಿ ಹೇಳಿದ್ದಾಳೆ. ಅಂದಹಾಗೆ ಈ ವಿಡಿಯೋ ಒಂದು ವರ್ಷದ ಹಿಂದಿನದ್ದಾಗಿದೆ. ವಿಶ್ವಕಪ್ ಸೋಲಿನ ಬೆನ್ನಲ್ಲೇ ಈ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
The way she answered 🥹❤
Samaira said : He is in a room, he is almost positive & within one month he will laugh again.@ImRo45 pic.twitter.com/yt3iSQa6MP
— 2ndiplcenturywhenRohit (@RohitCharan_45) November 23, 2023