ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಶ್ವಾನ ಪ್ರಿಯರಿಗೆ ಗುಡ್ನ್ಯೂಸ್ ಕೊಟ್ಟಿದೆ. ಕಳೆದ ವರ್ಷದಂತೆ ಈ ವರ್ಷವೂ ಪಂದ್ಯ ನೋಡಲು ಬರೋ ಅಭಿಮಾನಿಗಳು ತಮ್ಮ ಶ್ವಾನವನ್ನೂ ಕರೆದುಕೊಂಡು ಬರಬಹುದು.
ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್ನ ಬಳಿಯೇ ಶ್ವಾನಗಳಿಗಾಗಿ ‘ಡಾಗ್ ಔಟ್’ ನಿರ್ಮಿಸಲಾಗಿದೆ. ಇಲ್ಲಿ ಶ್ವಾನಗಳನ್ನ ಬಿಟ್ಟು ಪಂದ್ಯವನ್ನ ವೀಕ್ಷಿಸಬಹುದಾಗಿದೆ.
ಇನ್ನು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಎರಡೂ ತಂಡಗಳ ವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನೊಂದಿಗೆ ಹಳೆ ಟ್ರ್ಯಾಕ್ಗೆ ಮರಳಿದೆ. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಆಡಿರುವ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಈ ಬಿಗ್ ಫೈಟ್ ಮೇಲೆ ಎಲ್ಲರ ನಿರೀಕ್ಷೆಯಿದೆ.
DOGOUT: A unique initiative where a section of the Chinnaswamy stadium is dedicated to our Furry friends! 🐶
Isn’t that pawsome? 🐾🤩#PlayBold #ನಮ್ಮRCB #IPL2024 pic.twitter.com/GYgomhSM8I
— Royal Challengers Bengaluru (@RCBTweets) March 28, 2024