ಮುಂಬೈ: ಇನ್ನೇನು ಈ ವರ್ಷದ ಅಂದರೆ 2024ರ ಪ್ರೀಮಿಯರ್ ಲೀಗ್ಗೆ ಕೆಲವೇ ದಿನಗಳು ಬಾಕಿ ಇದೆ. ಆರ್ಸಿಬಿ ಈ ಬಾರಿ ಕಪ್ ಗೆಲ್ಲುವ ಸಂಪೂರ್ಣ ಭರವಸೆಯೊಂದಿಗೆ ತನ್ನ ತಯಾರಿ ನಡೆಸಿದೆ.ಆದರೆ ಮಾಜಿ ಕ್ರಿಕೆಟ್ ದಿಗ್ಗಜನ ಮಾತಿಗೆ ಆರ್ಸಿಬಿ ತಂಡ ದಂಗಾಗಿದೆ.
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭ ತಂದೆಯಾಗುತ್ತಿರುವ ವಿರಾಟ್ ಇನ್ಸ್ಟಗ್ರಾಮ್ ಸೇರಿದಂತೆ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಇನ್ನು ಅನುಷ್ಕಾ ಮೊದಲ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಸೀರೀಸ್ನಿಂದ ಹಿಂದೆ ಸರಿದಿದ್ದರು.ಹಾಗಾಗಿ ಈ ಬಾರಿಯು ಐಪಿಎಲ್ ನಲ್ಲಿ ಆಡೋದು ಡೌಟ್ ಎನ್ನಲಾಗಿದೆ.
ಈ ಕುರಿತು ಸುನಿಲ್ ಗವಾಸ್ಕರ್, ಕೊಹ್ಲಿ ಈ ಬಾರಿ ಆಡುವುದು ಡೌಟ್. ಅದಕ್ಕೆ ಹಲವು ಕಾರಣಗಳು ಇವೆ. ಬಹುಶಃ ಕೊಹ್ಲಿ ಈ ಐಪಿಎಲ್ ಸೀಸನ್ ಆಡಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.