News Karnataka Kannada
Monday, April 29 2024
ಕ್ರೀಡೆ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ತಂಡಕ್ಕೆ ಭರ್ಜರಿ ಗೆಲುವು

Pro Kabaddi: Bengaluru Bulls won the match
Photo Credit : Twitter

ಬೆಂಗಳೂರು: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೊ ಕಬಡ್ಡಿಲೀಗ್‌ 9ನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು ಮೊದಲ ದಿನ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 34-29 ಅಂಕಗಳ ಅಂತರದಲ್ಲಿ ಗೆದ್ದು ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಮಹೇಂದರ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿದ ಬುಲ್ಸ್ ತಂಡ ಇಂದು ಸಾಂಗಿಕ ಪ್ರದರ್ಶನ ನೀಡಿತು. ನೀರಜ್ ನರ್ವಾಲ್ 7 ಅಂಕಗಳನ್ನು ಗಳಿಸಿದರೆ ವಿಕಾಸ್ ಖಂಡೋಲಾ 5 ಅಂಕಗಳನ್ನು ಗಳಿಸಿದರು.ಸೌರಬ್ ನಂದಾಲ್ ಡಿಫೆಂಡರ್ ಆಗಿ ನಾಲ್ಕು ಅಂಕಗಳನ್ನು ತಂಡದ ಪರವಾಗಿ ಗಳಿಸಿದರು.

ಎದುರಾಳಿ ಟೈಟನ್ಸ್ ತಂಡದ ಪರವಾಗಿ ವಿನಯ್ ಹಾಗೂ ರಜ್ನೀಶ್ ತಲಾ 7 ಅಂಕಗಳನ್ನು ತಂಡಕ್ಕೆ ನೀಡಿದರು. ಅಂತಿಮವಾಗಿ ಈ ಪಂದ್ಯವನ್ನು ಬೆಂಗಳೂರು ಬುಲ್ಸ್ ತಂಡ 34-29 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಗೆಲುವು ಸಾಧಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು