ನಿನ್ನೆ ಪ್ರೊ ಕಬಡ್ಡಿಯಲ್ಲಿ ತಮಿಳ್ ತಲೈವಾಸ್ ಹಾಗೂ ಬೆಂಗಳೂರು ಬುಲ್ಸ್ ನಡುವೆ ಪಂದ್ಯ ನಡೆದಿದ್ದು, ಬೆಂಗಳೂರು ಬುಲ್ಸ್ ಸೋಲು ಕಂಡಿದೆ.
ತಮಿಳ್ ತಲೈವಾಸ್ ವಿರುದ್ಧ 24-42 ಅಂತರದಿಂದ ಎಡವಿ ಬುಲ್ಸ್ ಸೋಲು ಕಂಡಿದೆ. ಪಂದ್ಯದ ಆರಂಭ ಉತ್ತಮವಾಗಿದ್ದು, ಕ್ಯಾಪ್ಟನ್ ಪವನ್ ಕುಮಾರ್ ಆರಂಭಿಕ ಪಾಯಿಂಟ್ ಕಲೆ ಹಾಕಿದ್ದರು.
ನಂತರ ತಮಿಳ್ ತಲೈವಾಸ್ ಸೂಪರ್ ಕಂ ಬ್ಯಾಕ್ ಮಾಡಿದ್ದು, ಟ್ಯಾಕಲ್ಗಳು ಗಮನ ಸೆಳೆದವು. ತಮಿಳ್ ತಂಡದ ಸ್ಟಾರ್ ರೈಡರ್ ಅಜಿಂಕ್ಯ ಪವಾರ್ ೬ರೈಡ್ ಪಾಯಿಂಟ್ ಗಳಿಸಿ ಗೆಲುವಿಗೆ ಕಾರಣರಾದ್ರು.