ಮುಂಬೈ: ಪ್ರೋ ಕಬಡ್ಡಿ ಲೀಗ್ ಸೀಸನ್ 10 ಪ್ರಾರಂಭವಾಗಿದೆ. ಕಳೆದ ದಿನ ಗುಜರಾತ್ ತಂಡ ತೆಲುಗು ಟೈಟಾನ್ಸ್ ಅನ್ನು ಸೋಲಿಸುವ ಮೂಲಕ ಜಯಭೇರಿ ಬಾರಿಸಿದೆ. 2ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾಸ್ ತಂಡವನ್ನು 34 ಪಾಯಿಂಟ್ ಗಳಿಸುವ ಮೂಲಕ ಗೆಲುವು ಸಾಧಿಸಿದೆ.
ಆದರೆ ಇಂದು ತಮಿಳು ತಲೈವಾ ಮತ್ತು ದಬಾಂಗ್ ಡೆಲ್ಲಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಜೊತೆಗೆ 2ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಬೆಂಗಳೂರು ಬುಲ್ಸ್ ಜೊತೆ ಹೋರಾಡಲಿದೆ.
ಅಂದಹಾಗೆಯೇ ನಿನ್ನೆ ಗುಜರಾತ್ ತಂಡ ಗೆಲುವು ಸಾಧಿಸಿದ್ದು, ಇಂದು ಎರಡನೇ ಪಂದ್ಯ ಎದುರಿಸುತ್ತಿದೆ. ಆದರೆ ಬೆಂಗಳೂರು ಬುಲ್ಸ್ ಪಿಕೆಎಲ್ 10ನೇ ಸೀಸನ್ನ ಮೊದಲ ಪಂದ್ಯವನ್ನು ಎದುರಿಸುತ್ತಿದ್ದು, ಇಂದಿನ ಪಂದ್ಯದ ಮೇಲೆ ಭಾರೀ ನಿರೀಕ್ಷೆಯಿದೆ.
ಮತ್ತೊಂದೆಡೆ ಟೀಂ ಇಂಡಿಯಾ ಇಂದು ಆಸೀಸ್ ತಂಡವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸುತ್ತಿದೆ. ಹಾಗಾಗಿ ವೀಕ್ಷಕರಿಗಂತೂ ಇಂದು ಡಬಲ್ ಢಮಾಕ ಮನೆಮಾಡಿದೆ.