News Karnataka Kannada
Thursday, May 02 2024
ಉತ್ತರ ಪ್ರದೇಶ

ಲಕ್ನೊ: ನದಿಗುರುಳಿದ ಟ್ರ್ಯಾಕ್ಟರ್, 9 ಮಂದಿ ಸಾವು

Lucknow: 9 killed as tractor falls into river
Photo Credit : IANS

ಲಕ್ನೊ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ನದಿಗೆ ಬಿದ್ದು ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 50 ಭಕ್ತರನ್ನು ಹೊತ್ತ ಟ್ರಾಕ್ಟರ್ ಪೂಜೆಯೊಂದಕ್ಕೆ ತೆರಳಲು ಹೋಗುತ್ತಿದ್ದಾಗ ರಾಂಡೌಲ್ ಗ್ರಾಮದಲ್ಲಿ ಚರಂಡಿಗೆ ಉರುಳಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.

ರಸ್ತೆ ಅಪಘಾತಕ್ಕೆ ಬಲಿಯಾದವರನ್ನು ಸುಲೋಚನಾ (58), ಮಂಗಳೇಶ್ (50) ಮತ್ತು ಐದು ಮತ್ತು 12 ವರ್ಷದ ಅದಿತಿ ಮತ್ತು ಅರ್ಜುನ್ ಎಂದು ಗುರುತಿಸಲಾಗಿದೆ. ನದಿ ಪ್ರವಾಹದಿಂದಾಗಿ ಹಲವಾರು ಜನರು ಕೊಚ್ಚಿಕೊಂಡು ಹೋಗಿದ್ದಾರೆ. ನಾಪತ್ತೆಯಾದರ ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಹರಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ದಿನೇಶ್ ಚಂದ್ ಮತ್ತು ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ಭೇಟಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು