ಹೊಸದಿಲ್ಲಿ: ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಸ್ವಲ್ಪ ವಾಗ್ವಾದ ನಡೆದಿತ್ತು. ನಂತರ ವೇಗಿ ಶ್ರೀಶಾಂತ್, ಗಂಭೀರ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈ ವಿಡಿಯೋಗಳಲ್ಲಿ ಮೇಲೆ ಹೇಳಿದಂತೆ ಗಂಭೀರ್ ನನ್ನನ್ನು ಫಿಕ್ಸರ್ ಎಂದು ಕರೆದು ಅವಮಾನಿಸಿದರು.
ಅಲ್ಲದೆ ಅಂಪೈರ್ ಉಪಸ್ಥಿತಿಯಲ್ಲೂ ಗಂಭೀರ್ ಇದೇ ರೀತಿಯಾಗಿ ನನ್ನನ್ನು ನಿಂದಿಸಿದರು ಎಂದು ಆರೋಪಿಸಿದ್ದರು. ಈ ಹೇಳಿಕೆ ನೀಡಿದಕ್ಕಾಗಿ ಕ್ರಿಕೆಟ್ ಕಮಿಷನರ್ ಈಗಾಗಲೇ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.