News Karnataka Kannada
Monday, April 29 2024
ಕ್ರೀಡೆ

ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 5 ವಿಕೆಟ್‌ಗಳ ಜಯ

New Zealand beat Sri Lanka by 5 wickets
Photo Credit : News Kannada

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್‌ 5 ವಿಕೆಟ್‌ಗಳಿಂದ ಮಣಿಸಿದೆ. ಶ್ರೀಲಂಕಾ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸ್‌ ಮೊದಲು ಫೀಲ್ಡಿಂಗ್‌ ಆಯ್ದುಕೊಂಡರು.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 46 .4 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತು.

ನ್ಯೂಜಿಲೆಂಡ್‌ ಪರ ಬೌಲ್ಟ್‌ 3, ಲೋಕಿ, ಸಂತ್ನಾರ್‌, ರವೀಂದ್ರ ತಲಾ ಎರಡು ವಿಕೆಟ್‌ ಪಡೆದರು. ಶ್ರೀಲಂಕಾ ಪರ ಕುಶಲ್‌ ಪೆರೆರಾ 51, ಮಹೀಶಾ ತೀಕ್ಷಣ 39 ರನ್‌ ಗಳಿಸಿ ಗಮನಸೆಳೆದರು.

ನ್ಯೂಜಿಲೆಂಡ್‌ 23.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್‌ ಪರ ರಚಿನ್‌ ರವೀಂದ್ರ 42, ಕಾನ್ವಿ 45 ರನ್‌ ಗಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು