ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆದ್ದಿರುವ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಚರಿತ್ ಅಸಲಂಕಾ ವಿಕೆಟ್ ಪಡೆದಿದ್ದಾರೆ ಸಿರಾಜ್. ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ ಕ್ಯಾಚ್ ಔಟ್ ಆಗಿದ್ದಾರೆ. ಮೊಹಮ್ಮದ್ ಸಿರಾಜ್ 4ನೇ ಓವರ್ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ. ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಕ್ಲೀನ್ ಬೌಲ್ಡ್ ಆಗಿದ್ದಾರೆ. ಒಟ್ಟಿನಲ್ಲಿ ಕೇವಲ 17ರನ್ ನೀಡಿ 6ನೇ ಓವರ್ ಗೆ ಸದ್ಯ ಸಿರಾಜ್ ಶ್ರೀಲಂಕಾದ ಆರು ವಿಕೆಟ್ ಕಬಳಿಸಿ ಶಾಕ್ ನೀಡಿದ್ದಾರೆ.
7 ವಿಕೆಟ್ ನಷ್ಟಕ್ಕೆ 10 ಓವರ್ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ 31 ರನ್ ಕಲೆಹಾಕಿದೆ.