ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಡಿಜಿಟಲ್ ಹಕ್ಕುಗಳನ್ನು ಹೊಂದಿರುವ ಜಿಯೋ ಸಿನಿಮಾ, 35 ಕ್ಕೂ ಹೆಚ್ಚು ನಗರಗಳಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸುವ ಮೂಲಕ ಕ್ರಿಕೆಟ್ ವೀಕ್ಷಣೆ ಅವಕಾಶ ನೀಡಲಿದೆ.
13 ರಾಜ್ಯಗಳಲ್ಲಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಆಫ್ ಹೋಮ್ ಪಂದ್ಯಾಟ ವೀಕ್ಷಣೆಗೆ ಅವಕಾಶ ನೀಡಲಿದೆ. ಈ ಸ್ಥಳಗಳಲ್ಲಿ ಕ್ರಿಕೆಟ್ ವೀಕ್ಷಣೆಗೆ ಪ್ರವೇಶ ಉಚಿತವಾಗಿದೆ. ಫ್ಯಾನ್ ಪಾರ್ಕ್ಗಳಲ್ಲಿ ತಾಜಾ ಗಾಳಿಯೊಂದಿಗೆ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಪಂದ್ಯಾಟ ವೀಕ್ಷಿಸಬಹುದು ಕುಟುಂಬ ವಲಯ, ಮಕ್ಕಳ ವಲಯ, ಆಹಾರಕ್ಕೆ ಪ್ರತ್ಯೇಕ ಸ್ಥಳಗಳನ್ನು ನಿಗದಿ ಮಾಡಲಾಗಿ ಎಂದು ಕಂಪನಿ ಹೇಳಿದೆ.
ಏಪ್ರಿಲ್ 15 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ ಪಂದ್ಯದ ಲೈವ್ ಸ್ಟ್ರೀಮಿಂಗ್ಗಾಗಿ ಘಜಿಯಾಬಾದ್, ಗೋರಖ್ಪುರ ಮತ್ತು ರೋಹ್ಟಕ್ನಲ್ಲಿರುವ ಫ್ಯಾನ್ ಪಾರ್ಕ್ಗಳಲ್ಲಿ ಲೈವ್ ಸ್ಟ್ರಿಮ್ಗೆ ಅವಕಾಶ ನೀಡಲಾಗಿದೆ.