ದುಬೈ: ಐಪಿಎಲ್ ಹರಾಜು ಪ್ರಕ್ರಿಯೆ ದುಬೈನಲ್ಲಿನಡೆಯುತ್ತಿದೆ. ಆರ್ಸಿಬಿ ತಂಡದ ಮಾಜಿ ಆಟಗಾರ ವನಿಂದು ಹಸರಂಗ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 1.50 ಕೋಟಿಗೆ ಖರೀದಿ ಮಾಡಿದೆ. ಅದೇ ರೀತಿ ಮೊದಲ ಸುತ್ತಿನಲ್ಲಿ ಕನ್ನಡಿಗರಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಅನ್ಸೋಲ್ಡ್ ಆಗಿದ್ದಾರೆ ಎಂದು ತಿಳಿದು ಬಂದಿದೆ
ಕರ್ನಾಟಕದ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ಗೆ ಭಾರೀ ನಿರಾಸೆ ಆಗಿದೆ. ಇಬ್ಬರು ಆಟಗಾರರನ್ನು ಖರೀದಿ ಮಾಡಲು ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ. ಪರಿಣಾಮ ಸೇಲ್ ಆಗದೇ ಹಾಗೇ ಉಳಿದುಕೊಂಡಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾದ ದಂತಕತೆ ಸ್ಟೀವನ್ ಸ್ಮಿತ್ ಕೂಡ ಹರಾಜಾಗಿಲ್ಲ ಎಂದು ವರದಿಯಾಗಿದೆ.
ಇತ್ತ 2024ರ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ಟೀಮ್ ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇಡೀ ಐಪಿಎಲ್ ಇತಿಹಾಸದಲ್ಲೇ ಮಿಚೆಲ್ ಸ್ಟಾರ್ಕ್ ಅವರು ಬಹು ದೊಡ್ಡ ಬೆಲೆಗೆ ಹರಾಜು ಆಗಿ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಫೇಸ್ ಬೌಲರ್ ಆಗಿರುವ ಮಿಚೆಲ್ ಸ್ಟಾರ್ಕ್ಗೆ ಮಣೆ ಹಾಕಿರುವ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನ ಕೊಟ್ಟು ತಂಡಕ್ಕೆ ಸ್ವಾಗತ ಕೋರಿದೆ.