News Karnataka Kannada
Monday, May 06 2024
ಕ್ರೀಡೆ

ಖೇಲೋ ಇಂಡಿಯಾ: ಆಳ್ವಾಸ್ ಕ್ರೀಡಾಪಟುಗಳಿಂದ ಅಮೋಘ ಸಾಧನೆ

Khelo India: Alva's athletes perform superbly
Photo Credit : News Kannada

ಮೂಡುಬಿದಿರೆ: ಲಕ್ನೋದಲ್ಲಿ ನಡೆಯುತ್ತಿರುವ 3ನೇ ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್ನ ಅಥ್ಲೆಟಿಕ್ಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್ ಹಾಗೂ ಮಲ್ಲಕಂಬದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಅತ್ಯುತ್ತಮ ಸಾಧನೆ ಮಾಡಿದ್ದು, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 60 ಕ್ರೀಡಾಪಟುಗಳ ಪೈಕಿ 49 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪೈಕಿ ಅಥ್ಲೆಟಿಕ್ಸ್ನ ಮಹಿಳಾ ವಿಭಾಗದಲ್ಲಿ ವಿಶ್ವವಿದ್ಯಾಲಯವು ಸತತ ಮೂರನೇ ಬಾರಿ ಚಾಂಪಿಯನ್ ಆಗಿದ್ದು, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 12 ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. 54 ಅಂಕಗಳೊAದಿಗೆ ಮಹಿಳೆಯರು ಚಾಂಪಿಯನ್ ಪಟ್ಟ ಪಡೆದಿದೆ.

ಪುರುಷರು ರಾಷ್ಟçಮಟ್ಟದಲ್ಲಿ 5ನೇ ಸ್ಥಾನ ಪಡೆದಿದ್ದು, ವಿಶ್ವವಿದ್ಯಾಲಯ ಪ್ರತಿನಿಧಿಸಿದ 14 ಕ್ರೀಡಾಪುಟಗಳಲ್ಲಿ 13 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಾಲಿಬಾಲ್‌ನಲ್ಲಿ ಬೆಳ್ಳಿಪದಕ ಪಡೆದಿದ್ದು, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 12 ಕ್ರೀಡಾಪಟುಗಳ ಪೈಕಿ 5 ಮಂದಿ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು. ವೇಟ್‌ಲಿಫ್ಟಿಂಗ್‌ನಲ್ಲಿ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಆಳ್ವಾಸ್ ಕಾಲೇಜಿನ 7 ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಮಹಿಳಾ ವಿಭಾಗದಲ್ಲಿ ಬೆಳ್ಳಿ ಹಾಗೂ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಪಡೆದಿದೆ. ಮಲ್ಲಕಂಬದ ಮಹಿಳಾ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ 6ನೇ ಸ್ಥಾನ ಬಂದಿದ್ದು, ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಆಳ್ವಾಸ್ ಕಾಲೇಜಿನ 12 ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು.

ಈ ಬಾರಿ ಖೇಲೋ ಇಂಡಿಯಾದಲ್ಲಿ ವಿಶ್ವವಿದ್ಯಾಲಯವು 3 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕ ಮುಡಿಗೇರಿಸಿಕೊಂಡಿದೆ.

ಪದಕ ವಿಜೇತ ವಿದ್ಯಾರ್ಥಿಗಳು:
ಆಳ್ವಾಸ್ ಕಾಲೇಜಿನ ಬಸಂತಿ ಕುಮಾರಿ (10,000 ಮೀ ಓಟ- ಪ್ರಥಮ(ಚಿನ್ನ), 5,000 ಮೀ. ಓಟ- ದ್ವಿತೀಯ(ಬೆಳ್ಳಿ) , 4*400 ರಿಲೇ -ದ್ವಿತೀಯ(ಬೆಳ್ಳಿ)), ಪೂನಂ ಸೋನುನೆ (10,000 ಮೀ ಓಟ-ತೃತೀಯ (ಕಂಚು), 5,000 ಮೀ. ಓಟ- ಪ್ರಥಮ(ಚಿನ್ನ), ಪಲ್ಲವಿ ಪಾಟೀಲ್ (ಹೈಜಂಪ್- ಪ್ರಥಮ(ಚಿನ್ನ), ಸ್ನೇಹಲತಾ ಯಾದವ್ (1,500 ಮೀ ಓಟ- ದ್ವಿತೀಯ(ಬೆಳ್ಳಿ), 4*400 ರಿಲೇ- ದ್ವಿತೀಯ(ಬೆಳ್ಳಿ)), ಅಂಜಲಿ ಸಿ. (100 ಮೀ ಹರ್ಡಲ್ಸ್- ದ್ವಿತೀಯ(ಬೆಳ್ಳಿ), ಟ್ರಿಪಲ್ ಜಂಪ್- ದ್ವಿತೀಯ(ಬೆಳ್ಳಿ)), ದೀಪಶ್ರೀ (4*400 ಮೀ. ರಿಲೇ- ದ್ವಿತೀಯ(ಬೆಳ್ಳಿ), ಉಜ್ವಲ್ (ಡಿಸ್ಕಸ್ ಎಸೆತ- ತೃತೀಯ(ಕಂಚು)), ವಿಶೇಷ್ ಮೆಹ್ತಾ (1,500 ಮೀ ಓಟ- ತೃತೀಯ(ಕಂಚು), ಉಪೇಂದ್ರ ಬಲಿಯಾನ್ (10,000 ಮೀ ಓಟ- ತೃತೀಯ(ಕಂಚು)), ಪ್ರಶಾಂತ್ ಸಿನ್ಹಾ (ವೇಟ್‌ಲಿಫ್ಟಿಂಗ್ –ತೃತೀಯ(ಕಂಚು), ಲಕ್ಷಿö್ಮÃ (ವೇಟ್‌ಲಿಫ್ಟಿಂಗ್- ದ್ವಿತೀಯ(ಬೆಳ್ಳಿ).

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು