ದುಬೈ: ಐಪಿಎಲ್ ಸೀಸನ್ 17 ಮಿನಿ ಹರಾಜಿನ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ 4 ಕೋಟಿ ರೂ.ಗೆ ಹರಾಜಾಗಿದ್ದಾರೆ. ಮೊದಲ ಸೆಟ್ನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಬ್ರೂಕ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಆಸಕ್ತಿವಹಿಸಿದ್ದವು.
ಆದರೆ ಅಂತಿಮವಾಗಿ 4 ಕೋಟಿ ರೂ. ಬಿಡ್ಡಿಂಗ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನದಾಗಿಸಿಕೊಂಡಿದೆ. ಅದರಂತೆ ಈ ಬಾರಿ ಹ್ಯಾರಿ ಬ್ರೂಕ್ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ.
ಐಪಿಎಲ್ 2023 ರಲ್ಲಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ. ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. SRH ಪರ 11 ಪಂದ್ಯಗಳನ್ನಾಡಿದ್ದ ಬ್ರೂಕ್ 1 ಶತಕದೊಂದಿಗೆ ಕೇವಲ 190 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡವು ಅವರನ್ನು ಬಿಡುಗಡೆ ಮಾಡಿತ್ತು.