ಲಂಡನ್ : ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 0-1 ಅಂತರದಲ್ಲಿ ಕಳೆದುಕೊಂಡಿರುವ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
“ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ನಂತರ ನಾನು ಇಂಗ್ಲೆಂಡ್ ಪುರುಷರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ನಿರ್ಧಾರವಾಗಿದೆ. ಈ ನಿರ್ಧಾರದ ಕುರಿತು ನನ್ನ ಕುಟುಂಬ ಹಾಗೂ ನನಗೆ ಹತ್ತಿರವಿರುವವರೊಂದಿಗೆ ಚರ್ಚಿಸಿದ್ದೇನೆ. ನಾನು ನಿರ್ಧಾರ ತೆಗೆದುಕೊಂಡ ಸಮಯ ಸರಿಯಾಗಿದೆ ಎಂದು ನನಗೆ ತಿಳಿದಿದೆ” ಎಂದು ರೂಟ್ ಹೇಳಿದ್ದಾರೆ.
“ನನ್ನ ದೇಶಕ್ಕಾಗಿ ನಾಯಕತ್ವ ವಹಿಸಿದ್ದಕ್ಕಾಗಿ ನಾನು ಅಪಾರ ಹೆಮ್ಮೆಪಡುತ್ತೇನೆ ಹಾಗೂ ಅಗಾಧವಾದ ಹೆಮ್ಮೆಯಿಂದ ಕಳೆದ ಐದು ವರ್ಷಗಳನ್ನು ಅವಲೋಕಿಸಲು ಬಯಸುವೆ” ಎಂದರು.