News Karnataka Kannada
Sunday, May 05 2024
ಕ್ರೀಡೆ

ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಇಂಗ್ಲೆಂಡ್‌ ಆಲ್‌ರೌಂಡರ್ ಟಿಮ್ ಬ್ರೆಸ್ನನ್

Cricket England
Photo Credit :

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಕಳೆದ 20 ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡ ಬ್ರೆಸ್ನನ್ ಇದೀಗ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬ್ರೆಸ್ನನ್ 2010-11 ಮತ್ತು 2013 ರಲ್ಲಿ ಪ್ರತಿಷ್ಠಿತ ಆಯಶಸ್ ಸರಣಿಯನ್ನು ಗೆದ್ದ ಇಂಗ್ಲೆಂಡ್ ತಂಡದ ಸದಸ್ಯರಾಗಿದ್ದು, ಜೊತೆಗೆ 2010ರಲ್ಲಿ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದಲ್ಲೂ ಭಾಗಿಯಾಗಿದ್ದರು.

‘ಇದು ತುಂಬಾ ಕಠಿಣ ನಿರ್ಧಾರ. ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ 21 ನೇ ವೃತ್ತಿಪರ ವರ್ಷಕ್ಕೆ ಮರಳಿ ಬರಲು ನಾನು ಆಫ್-ಸೀಸನ್​ ಉದ್ದಕ್ಕೂ ಶ್ರಮಿಸುತ್ತಿದ್ದೆ. ಆದರೆ ನಾನು ನಿಗದಿಪಡಿಸಿದ ಮಾನದಂಡವನ್ನು ನಾನು ತಲುಪಲು ಸಾಧ್ಯವಿಲ್ಲ. ಆದರೆ ಯಾವತ್ತು ಆಟದ ಬಗ್ಗೆ ನನ್ನಲ್ಲಿದ್ದ ಹಸಿವು ಮತ್ತು ಉತ್ಸಾಹವು ಎಂದಿಗೂ ಕುಗ್ಗುವುದಿಲ್ಲ. 2022ರ ಸೀಸನ್‌ನಲ್ಲಿ ನಾನು ಆಡಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ದೇಹ ಸಿದ್ಧವಾಗಿಲ್ಲ. ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಬಹಳ ಹೆಮ್ಮೆಯಿಂದ ನೋಡುತ್ತೇನೆ ಮತ್ತು ವಾರ್ವಿಕ್‌ಷೈರ್ ಮತ್ತು ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ. ಎಂದು ಟಿಮ್ ಬ್ರೆಸ್ನನ್ ವಿದಾಯ ಪತ್ರದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ.

ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ. 85 ಏಕದಿನ ಪಂದ್ಯಗಳಲ್ಲಿ 109 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ ಆಡಿದ 34 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು