ಇಸ್ಲಮಾಬಾದ್: ಪಾಕಿಸ್ತಾನದ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ ಶನಿವಾರ 59 ಕ್ಕೆ ಏರಿದೆ. ಈ ನಡುವೆ ಈ ಕೃತ್ಯದಲ್ಲಿ ಭಾರತದ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದಂದು ಬಲೂಚಿಸ್ತಾನದ ದಕ್ಷಿಣ ಪ್ರಾಂತ್ಯದ ಮಸ್ತುಂಗ್ನಲ್ಲಿ ಮೆರವಣಿಗೆ ನಡೆದಿದ್ದು ಪೊಲೀಸ್ ವಾಹನದ ಬಳಿ ಬಾಂಬರ್ ಸ್ಫೋಟ ನಡೆಸಿದ್ದ. ಈ ಕೃತ್ಯದ ಹಿಂದೆ ಭಾರತವಿದೆ. ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳನ್ನು ಪ್ರಾಯೋಜಿಸುತ್ತದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಭಾರತ ಯಾವಾಗಲೂ ಈ ವಿಚಾರವನ್ನು ನಿರಾಕರಿಸುತ್ತದೆ ಎಂದು ಅವರು ಹೇಳಿದ್ದಾರೆ.